ನ್ಯೂಸ್

ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: 15 IPS​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ನಾಲ್ಕು ದಿನಗಳ ಹಿಂದಷ್ಟೇ 10 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ 15 ಐಪಿಎಸ್​ ಅಧಿಕಾರಿಗಳು ವರ್ಗಾಯಿಸಿ ಇಂದು (ಜೂ. 16) ಆದೇಶ ಹೊರಡಿಸಿದೆ.

ಕೆ. ರಾಮಚಂದ್ರ ರಾವ್, ಮಾಲಿನಿ ಕೃಷ್ಣಮೂರ್ತಿ, ಅರುಣ್ ಚಕ್ರವರ್ತಿ ಜೆ., ಮನೀಷ್ ಕರ್ಬಿಕರ್, ಎಂ. ಚಂದ್ರಶೇಖರ್, ವಿಪುಲ್ ಕುಮಾರ್, ಪ್ರವೀಣ್ ಮಧುಕರ್ ಪವಾರ್, ಎನ್. ಸತೀಶ್ ಕುಮಾರ್, ಸಂದೀಪ್ ಪಾಟಿಲ್, ವಿಕಾಸ್ ಕುಮಾರ್ ವಿಕಾಸ್, ರಮಣ್ ಗುಪ್ತಾ, ಎಸ್​.ಎನ್​. ಸಿದ್ದರಾಮಪ್ಪ, ಎಂ.ಬಿ. ಬೋರಲಿಂಗಯ್ಯ, ಸಿ. ವಂಶಿಕೃಷ್ಣ ಹಾಗೂ ಸಿ.ಬಿ. ರಿಷ್ಯಂತ್ ಅವರನ್ನು ತಕ್ಷಣ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದ ಸ್ಥಾನಗಳು ಈ ಕೆಳಕಂಡಂತಿವೆ

1. ರಾಮಚಂದ್ರ ರಾವ್ (ಪೊಲೀಸ್ ಗೃಹ ನಿರ್ಮಾಣ ನಿಗಮದ ಎಡಿಜಿಪಿ)

2. ಮಾಲಿನಿ ಕೃಷ್ಣಮೂರ್ತಿ (ಬಂಧಿಖಾನೆ ಎಡಿಜಿಪಿ)

3. ಅರುಣ್ ಚಕ್ರವರ್ತಿ (ಡಿಸಿಆರ್​ಇ, ಎಡಿಜಿಪಿ)

4. ಮನೀಷ್ ಕರ್ಬಿಕರ್ (ಸಿಐಡಿ, ಎಡಿಜಿಪಿ)

5. ಚಂದ್ರಶೇಖರ್ (ಐಎಸ್​ಡಿ, ಎಡಿಜಿಪಿ)

6. ವಿಪುಲ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪೂರ್ವ ವಲಯ)

7. ಪ್ರವೀಣ್ ಮಧುಕರ್ ಪವಾರ್ (ಐಜಿಪಿ, ಸಿಐಡಿ)

8. ಸತೀಶ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪಶ್ಚಿಮ ವಲಯ)

9. ಸಂದೀಪ್ ಪಾಟಿಲ್ (ಕೆಎಸ್ಆರ್​ಪಿ, ಐಜಿಪಿ)

10. ವಿಕಾಸ್ ಕುಮಾರ್ ವಿಕಾಸ್ (ಐಎಎಸ್​ಡಿ, ಐಜಿಪಿ)

11. ರಮಣ್ ಗುಪ್ತಾ (ಬೆಳಗಾವಿ ವಲಯ ಐಜಿಪಿ)

12. ಸಿದ್ದರಾಮಪ್ಪ (ಕೇಂದ್ರ ಕಚೇರಿ ಐಜಿಪಿ)

13. ಬೋರಲಿಂಗಯ್ಯ (ಮೈಸೂರು ವಲಯ ಡಿಐಜಿ)

14. ವಂಶಿಕೃಷ್ಣ (ಡಿಐಜಿ, ಸಿಐಡಿ)

15. ರಿಷ್ಯಂತ್ (ದಕ್ಷಿಣ ಕನ್ನಡ ಎಸ್​ಪಿ)

ಜೂ. 16ರಂದು ಐಎಎಸ್​ ಅಧಿಕಾರಿಗಳಾದ ಪಲ್ಲವಿ ಅಕುರಥಿ, ಡಾ. ವೆಂಕಟೇಶ್​ ಎಂ, ರವೀಂದ್ರ ಪಿ.ಎನ್​, ಶ್ರೀನಿವಾಸ್​ ಕೆ, ಜಾನಕಿ ಕೆ.ಎಂ., ಮುಲ್ಲೈ ಮುಹಿಲನ್​ ಎ.ಪಿ., ಯೋಗೇಶ್​ ಎ.ಎಂ., ಡಾ. ಕುಮಾರ, ಪ್ರಭು ಜಿ ಮತ್ತು ನವೀನ್​ ಕುಮಾರ್​ ರಾಜು ಅವರನ್ನು ಸರ್ಕಾರ ವರ್ಗಾವಣೆ ಮಾಡಿತು.