ನ್ಯೂಸ್

ಗೆಳತಿಯೊಂದಿಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡ! ಮುಂದೇನಾಯ್ತು ನೋಡಿ Fight Erupts On Road

Fight Erupts On Road: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ತನ್ನ ಗಂಡ ಆತನ ಗೆಳತಿಯೊಂದಿಗೆ ಇರುವುದನ್ನು ನೋಡಿದ ನಂತರ, ಅವರನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್​ ಆಗಿದೆ.

ಘಟನೆ ಏನು?

ಕಾನ್ಪುರದ ನರ್ವಾಲ್ ಬಳಿ ಮಹಿಳೆಯು ತನ್ನ ಪತಿ ಬೇರೆ ಹೆಣ್ಣಿನೊಂದಿಗೆ ಓಡಾಡುತ್ತಿರುವುದನ್ನು ನೋಡಿದ್ದಾಳೆ. ನಂತರ ಇದರ ಬಗ್ಗೆ ಪ್ರಶ್ನೇ ಮಾಡಲು ಪ್ರಾರಂಭಿಸಿದ್ದು, ಈ ವೇಳೆ ಮೂರು ಜನರ ನಡುವೆ ಗಲಾಟೆ ಭುಗಿಲೆದ್ದು, ಹೊಡೆದಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

ಈ ಹಿಂದೆ ಮಹಿಳೆಯು ತನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ಅನುಮಾನಿಸಿದ್ದಳು. ಗಂಡನನ್ನು ಗೆಳತಿಯೊಂದಿಗೆ ನೋಡಿ ಆಘಾತಕೊಳಗಾಗಿದ್ದಾಳೆ. ಆರಂಭದಲ್ಲಿ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಪತಿ ಸಾರ್ವಜನಿಕರ ಮುಂದೆ ಹೆಂಡತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಗೆಳತಿಯನ್ನು ಬೆಂಬಲಿಸಿದ ಪತಿ

ಇವರಿಬ್ಬರ ಜಗಳದಲ್ಲಿ ಮಧ್ಯಪ್ರವೇಶಿಸಿದ ಗೆಳತಿಯು ಮಹಿಳೆಯೊಂದಿಗೆ ಜಗಳ ಮಾಡುತ್ತಾ, ಇಬ್ಬರು ಹೊಡೆದಾಡಿಕೊಳ್ಳುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಈ ವೇಳೆ ಪತಿ ಗೆಳತಿಯನ್ನು ಬೆಂಬಲಿಸಿ ಅವಳಿಗೆ ಇನ್ನೂ ಜೋರಾಗಿ ಹೊಡಿ ಎಂದು ಕೂಗುತ್ತಿದ್ದಾನೆ.

ಈ ರೀತಿ ಇಬ್ಬರೂ ಮಹಿಳೆಯರು ಹೊಡೆದಾದಿಕೊಂಡರೂ ಸಹ ಪತಿ ದೂರದಲ್ಲಿ ಮೂಖ ಪ್ರೇಕ್ಷಕನಂತೆ ನಿಂತಿದ್ದನ್ನು ಕಂಡ ಸಾರ್ವಜನಿಕರು ಆತನಿಗೆ ಜಗಳ ಬಿಡಿಸಲು ಹೇಳಿದ್ದಾರೆ. ಆ ವ್ಯಕ್ತಿ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದರೂ ಅವರಿಬ್ಬರು ಆತನ ಮಾತನ್ನು ಕೇಳದೇ ಮತ್ತೆ ಕೂಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. (ಏಜೆನ್ಸೀಸ್​)