ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದೆ.
ಜ್ವರ ಮತ್ತು ಬೆನ್ನುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ. 23ರಂದು ಕರೊನಾ ತಪಾಸಣೆಗೆ ಡಿಕೆಶಿ ಒಳಗಾಗಿದ್ದರು. ಎರಡು ದಿನಗಳ ಬಳಿಕ ಬಂದ ವರದಿಯು ಪಾಸಿಟಿವ್ ಬಂದಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕು ಗುಣಮುಖವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಅವರಿಗೆ ಮನೆಯಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ಹಾಗಾಗ ಅವರು ಅಂದಿನಿಂದ ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಇದನ್ನೂ ಓದಿರಿ ಕರೊನಾ ಭಯ- ಮಕ್ಕಳನ್ನು ಕೂಡಿ ಹಾಕಿದ್ದ ಪಾಲಕರಿಗೆ ಕೋರ್ಟ್‌ನಿಂದ ಅಚ್ಚರಿಯ ಶಿಕ್ಷೆ
ಎರಡು ದಿನಗಳಿಂದ ಡಿಕೆಶಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಇನ್ನೂ ಕೆಲ ದಿನಗಳ ಕಾಲ ನಾನು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವೆ. ಕಾರ್ಯಕರ್ತರಾಗಲಿ, ಅಭಿಮಾನಿಗಳಾಗಲಿ ಆಸ್ಪತ್ರೆ ಅಥವಾ ನನ್ನ ನಿವಾಸಕ್ಕೆ ಆಗಮಿಸುವುದು ಬೇಡ' ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಡಿಕೆಶಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದ ವೇಳೆ ಅವರು ಶೀಘ್ರ ಗುಣಮುಖವಾಗಲೆಂದು ಪ್ರಾರ್ಥಿಸಿ ಅಭಿಮಾನಿಗಳು ವಿವಿಧೆಡೆ ಪೂಜೆ ಸಲ್ಲಿಸಿದ್ದರು. ವೈಯಾಲಿಕಾವಲ್ ಸಮೀಪದ ತಿರುಮಲ ತಿರುಪತಿ ದೇವಸ್ಥಾನದ ಎದುರು ಡಿಕೆಶಿ ಬೆಂಬಲಿಗರು 1001 ತೆಂಗಿನಕಾಯಿ ಒಡೆದಿದ್ದನ್ನು ಸ್ಮರಿಸಬಹುದು.