ಚನ್ನಪಟ್ಟಣ : ತಾಲೂಕಿನ ವಂದಾರಗುಪ್ಪೆ ಪೊಲೀಸ್ ತರಬೇತಿ ಶಾಲೆಯಲ್ಲಿ 200ಕ್ಕೂ ಹೆಚ್ಚಿನ ಪೊಲೀಸ್ ಪ್ರಶಿಕ್ಷಣಾರ್ಥಿಗಳು ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಶಾಲೆಯಲ್ಲಿ 720 ಮಂದಿ ತರಬೇತಿ ಯಲ್ಲಿದ್ದು, 100ಕ್ಕೂ ಅಧಿಕ ಮಂದಿ ವಾರದಿಂದಲೂ ಜ್ವರ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಜ್ವರ ಹೆಚ್ಚುತ್ತಿರುವುದು ಪ್ರಶಿಕ್ಷಣಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ವಾರ ಕೆಲ ಮಂದಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಕೊಡಿಸಲಾಗಿತ್ತು.
1000ಕ್ಕೂ ಹೆಚ್ಚಿನ ಮಂದಿ ಇರುವ ಪಿಟಿಎಸ್‌ನಲ್ಲಿ ವೈದ್ಯಕೀಯ ಸೇವೆ ಲಭ್ಯವಿಲ್ಲದಿರುವುದು ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಸಣ್ಣ ಕಾಯಿಲೆಗೂ ಚನ್ನಪಟ್ಟಣ ಅಥವಾ ರಾಮನಗರ ಆಸ್ಪತ್ರೆಗಳಿಗೆ ತೆರಳಬೇಕಾಗಿದೆ.
ಹಲವು ವರ್ಷಗಳ ಹಿಂದೆ ಕೇಂದ್ರದಲ್ಲಿ ಅನ್ಯಪರ ಸೇವೆಯ ಮೂಲಕ ವೈದ್ಯರು, ಶುಶ್ರೂಷಕರು, ಾರ್ವಾಸಿಸ್ಟ್ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈಗ ಾರ್ವಾಸಿಸ್ಟ್ ಒಬ್ಬರನ್ನು ಹೊರತುಪಡಿಸಿದರೆ, ಕೇಂದ್ರದಲ್ಲಿ ವೈದ್ಯಕೀಯ ಸೇವೆ ನೀಡುವವರು ಇಲ್ಲದಂತಾಗಿದೆ. ಕೆಲ ವರ್ಷದ ಹಿಂದೆ ಪಿಟಿಎಸ್‌ನಲ್ಲಿದ್ದ ವೈದ್ಯ ಹಾಗೂ ಶುಶ್ರೂಷಕರ ಹುದ್ದೆಯನ್ನೂ ತೆಗೆದುಹಾಕಲಾಗಿದೆ.
ನಿರಾಕರಣೆ: ಈ ವಿಚಾರವಾಗಿ ಪತ್ರಿಕೆಯೊಂದಿಗೆ ವಾತನಾಡಿರುವ ಕೇಂದ್ರದ ಪ್ರಾಂಶುಪಾಲ ಹಾಗೂ ಪಿಟಿಎಸ್ ಎಸ್‌ಪಿ ಶೈಲೇಂದ್ರಕುವಾರ್ ಈ ವಿಚಾರವನ್ನು ನಿರಾಕರಿಸಿದ್ದಾರೆ. ವಾತಾವರಣ ವ್ಯತ್ಯಯದಿಂದಾಗಿ ನಾಲ್ಕೈದು ಮಂದಿಗೆ ಜ್ವರ ಬಂದಿದೆ ಅಷ್ಟೇ. ಜ್ವರ ಬಂದಿರುವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಗುಣಮುಖವಾಗಿದ್ದಾರೆ ಎಂದಿದ್ದಾರೆ.