ಸಾಗರ: ನಮ್ಮ ಧಾರ್ಮಿಕ ಆಚರಣೆ ಮತ್ತು ಆರಾಧನೆಗಳು ಮಹತ್ವ ಹೊಂದಿವೆ. ರಂಗಿನೋಕುಳಿ ಮಾನಸಿಕ ಒತ್ತಡದಿಂದ ಮುಕ್ತವಾಗಿಸಿ, ಸಾಮಾಜಿಕ ಸಾಮರಸ್ಯ ಬೆಸೆಯಲು ಸಹಕಾರಿಯಾಗುತ್ತದೆ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.
ಪಟ್ಟಣದಲ್ಲಿ ಭಾನುವಾರ ರಂಗಪಂಚಮಿ ಉತ್ಸವ ಸಮಿತಿ ಆಯೋಜಿಸಿದ್ದ ಓಕುಳಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸಂಘಜೀವಿ. ಇಂತಹ ಉತ್ಸವಗಳು ಮನುಷ್ಯನ ಸಾಂಘಿಕ ಪ್ರಯತ್ನಕ್ಕೆ ಸಾಕ್ಷಿಯಾಗುತ್ತದೆ. ಕಳೆದ ಮೂರು ವರ್ಷಗಳಿಂದ ರಂಗ ಪಂಚಮಿ ಬಣ್ಣದ ಓಕುಳಿ ಆಚರಿಸುತ್ತಿದೆ. ಊರಿನ ಸಮಸ್ತರು ಒಂದೆಡೆ ಸೇರಿ ಓಕುಳಿ ಆಡುವುದರಿಂದ ಒಗ್ಗಟ್ಟು ಮೂಡಲು ಸಾಧ್ಯ ಎಂದು ಹೇಳಿದರು.
ಎಬಿವಿಪಿ ಎಸ್‌ಎ್ಡಿ ಘಟಕದ ಸಂಚಾಲಕ ಅಭಿಷೇಕ್ ಮಾತನಾಡಿ, ರಂಗ ಪಂಚಮಿ ಅತ್ಯಂತ ಶ್ರೇಷ್ಠ ದಿನವಾಗಿದೆ. ಹಿಂದು ಧರ್ಮೀಯರ ಅನೇಕ ಹಬ್ಬಗಳನ್ನು ಜಾತಿ, ಮತ, ಪಂಥ ಮೀರಿ ಆಚರಿಸಲಾಗುತ್ತದೆ. ಎಲ್ಲರೂ ಒಗ್ಗೂಡಿ ಸಾಮರಸ್ಯದಿಂದ ಆಚರಿಸಿದಾಗ ಮಾತ್ರ ಹಬ್ಬಗಳು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಮುಖಂಡರಾದ ಯಶವಂತ ಪಣಿ, ಕಿರಣ್ ಎಂ. ಶೇಟ್, ಪ್ರಶಾಂತ್ ರಾಯ್ಕರ್, ರಾಜು, ರವಿ, ಸತೀಶ್ ಗಾಯಕ್ವಾಡ್, ಗಣೇಶ್ ವಿ. ಶೇಟ್, ಜೀವನ್, ಪವನ್, ರಾಮು, ಸಂದೇಶ್, ರವಿ ಚಂದನ್ ಇದ್ದರು.