ನ್ಯೂಸ್

10 ವರ್ಷಗಳಲ್ಲಿ ಕೂಡಿಟ್ಟ ಹಣದಿಂದ ಖರೀದಿಸಿದ ಫೆರಾರಿ ಕಾರು ಸುಟ್ಟು ಭಸ್ಮ! ಮಾಲೀಕನ ಕಣ್ಣೀರಿಗಿಲ್ಲ ಕೊನೆ | Ferrari Car

Ferrari Car : ಜಪಾನಿನ ವ್ಯಕ್ತಿಯೊಬ್ಬನಿಗೆ ಶೋರೂಮ್​​ನಿಂದ ಹೊರತಂದ ಹೊಸ ಫೆರಾರಿ ಕಾರು ಒಂದೇ ಗಂಟೆಯೊಳಗೆ ಸುಟ್ಟು ಕರಕಲಾಗಿದೆ.

ಸಾಮಾನ್ಯವಾಗಿ ಐಷಾರಾಮಿ ಕಾರುಗಳು ತಗೆದುಕೊಳ್ಳಬೇಕು ಎಲ್ಲರ ಕನಸಾಗಿರುತ್ತದೆ. ಅದೇ ರೀತಿ ಜಪಾನಿನ ಸಂಗೀತ ನಿರ್ದೇಶಕನ ಕನಸು ಕೂಡ ಇದೆಯಾಗಿದೆ. ಕಳೆದ 10 ವರ್ಷಗಳಿಂದ ಫೆರಾರಿ ಕಾರು ತಗೆದುಕೊಳ್ಳಬೇಕು ಎಂದು ಅವರು ಕನಸ್ಸಾಗಿತ್ತು. ಅಲ್ಲದೆ, ಅದಕ್ಕಾಗಿ ಹಣವನ್ನೂ ಕೂಡ ಕೂಡಿಟ್ಟಿದ್ದ. ಇದೀಗ ಹೊಸ ಫೆರಾರಿ ಕಾರುಕೊಂಡ ಒಂದೇ ತಾಸಿನಲ್ಲಿ ಬೆಂಕಿಗೆ ಆಹುತಿಯಾಗಿದೆ. ಇತರ ಬಗ್ಗೆ ಇತ ತೀವ್ರ ದುಖಿತನಾಗಿದ್ದಾನೆ. ಇದೀಗ ಇತನ ಈ ಘಟನೆಗೆ ಜಪಾನಿನ ಬಹುತೇಕರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಸಂಗೀತ ನಿರ್ದೇಶಕ ಹೊಂಕರ್​, ವಾಹನ ವಿತರಣೆಯಾದ ಒಂದು ಗಂಟೆಯ ನಂತರ ತಮ್ಮ ವಾಹನ ಸುಟ್ಟುಹೋಯಿತು ಎಂದು ಹೇಳಿದ್ದಾನೆ. " ಜಪಾನ್‌ನಲ್ಲಿ ಈ ರೀತಿಯ ತೊಂದರೆ ಅನುಭವಿಸುತ್ತಿರುವ ಏಕೈಕ ವ್ಯಕ್ತಿ ನಾನೇ ಎಂದು ನಾನು ಭಾವಿಸುತ್ತೇನೆ" ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಫೆರಾರಿ 458 ಸ್ಪೈಡರ್ ಕಾರಿನ ಬೆಲೆ ಜಪಾನ್‌ನಲ್ಲಿ ಸುಮಾರು 43 ಮಿಲಿಯನ್ ಯೆನ್ ( ಸುಮಾರು 2.6 ಕೋಟಿ ರೂ.).

 ಏನಾಯಿತು ..?

ಜಪಾನಿನ ಟೋಕಿ ನಗರದಲ್ಲಿ ಶೋರೂಮ್​​ನಿಂದ ಹೊರ ಬಂದು ಒಂದೇ ಗಂಟೆಗಳ ಕಾಲ ಸಿಟಿಯಲ್ಲಿ ಸುತ್ತಾಡಿದ್ದಾನೆ. ರಸ್ತೆಯ ಫ್ಲೈಒವರ್​ ಮೇಲೆ ಕಾರು ಚಾಲನೆ ಮಾಡುತ್ತಿರುವಾಗ ಕಾರಲ್ಲಿ ಹೊಗೆ ಬರುತ್ತಿರುವುದನ್ನು ಚಾಲಕ ಕಮ್​ ಮಾಲೀಕ ಗಮನಿಸಿದ್ದಾನೆ. ಕಾರಿಂದ ಇಳಿದು ನೋಡಿದ ಬಳಿಕ ಇಂಜಿನ್​ನಿಂದ ಹೊಗೆ ಜತೆಗೆ ಬೆಂಕಿಗೆ ಬರುತ್ತಿರುವುದು ನೋಡಿದ್ದಾನೆ. ಇದರಿಂದ ತಕ್ಷಣ ಚಾಲಕ ದೂರ ಸರಿದ್ದಾನೆ. ಕಾರು ಏಕಾಏಕಿ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ. ಇದೇ ವಿಡಿಯೋ ಚಿತ್ರಿಕರಿಸಿ ಮಾಲೀಕ ನೋವು ತೊಡಿಕೊಂಡಿದ್ದಾನೆ.

ಘಟನೆಯ ಬಗ್ಗೆ ಟೋಕಿಯೊ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ.ಅದೃಷ್ಟವಶಾತ್, ಮಾಲೀಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.(ಏಜೆನ್ಸೀಸ್​)