ಭೋಪಾಲ್: ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ ಸಶಾ(3) ಹೆಸರಿನ ಹೆಣ್ಣು ಚೀತಾ ಮೂತ್ರಪಿಂಡ ಸೋಂಕಿನಿಂದ ಸೋಮವಾರ ಮೃತಪಟ್ಟಿದೆ.
ಭಾರತಕ್ಕೆ ತರುವ ಮೊದಲೇ ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಚೀತಾವನ್ನ ಕ್ವಾರಂಟೈನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. Project Cheetah ಹೆಸರಿನ ಯೋಜನೆಯಡಿ ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳನ್ನ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು.
ಸಶಾ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಚಿರತೆ ಸಂರಕ್ಷಣಾ ನಿಧಿಯ(CCF) ವಕ್ತಾರ ಸುಸಾನ್ ಯಾನೆಟ್ಟಿ ಚೀತಾ ಇಂದು ಬೆಳಗ್ಗೆ 8ಕ್ಕೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಮೂತ್ರಪಿಂಡದ ವೈಫಲ್ಯದಿಂದ ಚೀತಾ ಕೊನೆಯುಸಿರೆಳೆದಿರಬಹುದು ಎಂದು ಶಂಕಿಸಿದ್ದಾರೆ.
ಚೀತಾಗಳೂ ಸಹ ಮೂತ್ರಪಿಂಡದ ಸೋಂಕಿಗೆ ಒಳಗಾಗುತ್ತವೆ. ಅದಕ್ಕಾಗಿ ನಾವು ಅವುಗಳನ್ನ ಸೂಕ್ಷ್ಮ ಜೀವಿ ಎಂದು ಕರೆಯುತ್ತೇವೆ ಎಂದು CCFನ ವಕ್ತಾರ ಸುಸಾನ್ ಯಾನೆಟ್ಟಿ ತಿಳಿಸಿದ್ದಾರೆ.