Love: ಒಂದು ಗಂಡು ಹೆಣ್ಣಿನ ನಡುವೆ ಪ್ರೀತಿ ಅರಳುವುದು ಸಾಮಾನ್ಯ, ಅದೊಂದು ಪವಿತ್ರ ಸಂಬಂಧ. ಒಮ್ಮೆ ಈ ಪ್ರೀತಿ ಬಲೆಯಲ್ಲಿ ಬಿದ್ದವರು ಜಗವನ್ನೇ ಮರೆಯುತ್ತಾರೆ ಎಂಬ ಮಾತಿದೆ. ಈ ಲವ್ ಎನ್ನುವುದು ಕೇವಲ ಗಂಡು ಹೆಣ್ಣಿನ ಮಧ್ಯೆ ಅಷ್ಟೆ ಅಲ್ಲದೆ, ನಮ್ಮ ಕುಟುಂಬ, ಇಷ್ಟವಾದ ವಸ್ತು, ನಾವು ಇಷ್ಟಪಡುವ ಪ್ರಾಣಿ-ಪಕ್ಷಿ ಇವುಗಳನ್ನೇಲ್ಲಾ ಪ್ರೀತಿಸುತ್ತೇವೆ, ಇಷ್ಟಪಡುವು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಪ್ರೀತಿಸುವ ವಸ್ತುವನ್ನು ಕೇಳಿದ್ರೆ ನೀವು ಅಚ್ಚರಿ ಪಡೋದಂತೂ ಖಂಡಿತ. ಹೌದು ಈ ವ್ಯಕ್ತಿಯೂ ತನ್ನ ಬಾತ್ರೂಮ್ನಲ್ಲಿನ ಕಮೋಡ್ಅನ್ನು ವಧುವಿನಂತೆ ಸಿಂಗರಿಸಿ ಅದನ್ನು ಪ್ರೀತಿಸುತ್ತಾನೆ.
ಅಂದಹಾಗೆ ಅವನು ಯಾರು? ಕಮೋಡ್ ಮೇಲೆ ಯಾಕೆ ಅವನಿಗೆ ಈ ರೀತಿಯ ಹುಚ್ಚು ಪ್ರೀತಿ ಇದೆ ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.
ಈ ಜಗತ್ತಿನಲ್ಲಿ ಮನುಷ್ಯನ ಬದಲು ವಸ್ತುಗಳನ್ನೇ ಪ್ರೀತಿಸುವ ಅನೇಕ ಜನರಿದ್ದಾರೆ ಮತ್ತು ಕೆಲವರು ಅದೇ ವಸ್ತುಗಳನ್ನೇ ಮದುವೆಯನ್ನೂ ಸಹ ಆಗಿದ್ದಾರೆ. ಆದರೆ ಈಗ ತನ್ನ ಮನೆಯ ಬಾತ್ರೂಮ್ಅನ್ನು ಪ್ರೀತಿಸುವುದಾಗಿ ಹೇಳಿಕೊಳ್ಳುವ ವ್ಯಕ್ತಿಯೊಬ್ಬನ ವಿಡಿಯೋವೊಂದು ಹೊರಬಿದ್ದಿದೆ.
ಇಲ್ಲಿದೆ ನೋಡಿ ವಿಡಿಯೋ
ಈ ವೈರಲ್ ವೀಡಿಯೊದಲ್ಲಿ ಆ ವ್ಯಕ್ತಿಯ ನಿಜವಾದ ಪ್ರೀತಿ ಬಹಿರಂಗವಾಗಿದೆ. ಅವನು ಯಾವುದೇ ಮಹಿಳೆಯನ್ನು ಅಥವಾ ಯಾವುದೇ ಪುರುಷನನ್ನು ಪ್ರೀತಿಸಿಲ್ಲ. ಆ ವ್ಯಕ್ತಿಗೆ ತನ್ನ ಮನೆಯ ಬಾತ್ರೂಮ್ ತುಂಬಾ ಇಷ್ಟ. ಅವನು ತನ್ನ ಬಾತ್ರೂಮ್ ಅಲಂಕಾರಕ್ಕೆ ನೀರಿನಂತೆ ಹಣವನ್ನು ಖರ್ಚು ಮಾಡುತ್ತಾನೆ. ಅವನ ಬಾತ್ರೂಮಿನ ಪ್ರತಿಯೊಂದು ಮೂಲೆಯೂ ದುಬಾರಿ ವಸ್ತುಗಳಿಂದ ಅಲಂಕರಿಸಲ್ಪಟ್ಟಿದೆ. ಇಷ್ಟೇ ಅಲ್ಲ ಆ ವ್ಯಕ್ತಿ ತನ್ನ ಕಮೋಡ್ಅನ್ನು ವಧುವಿನಂತೆ ಅಲಂಕರಿಸಿದ್ದಾನೆ. ಈ ಪ್ರೇಮಕಥೆಯು ಎಲ್ಲರನ್ನೂ ಅಚ್ಚರಿಗೊಳಿದೆ.
ಎಂದಾದರೂ ಇಂತಹ ಪ್ರೀತಿಯನ್ನು ನೋಡಿದ್ದೀರಾ?
ಈ ವ್ಯಕ್ತಿಗೆ ತನ್ನ ಮನೆಯ ಬಾತ್ರೂಮಿನ ಮೇಲೆ ಅಪಾರ ಪ್ರೀತಿ ಇರುತ್ತದೆ. ಸ್ನಾನಗೃಹವನ್ನು ಅಲಂಕರಿಸುವಲ್ಲಿ ಅವರು ಯಾವುದೇ ಕಲ್ಲನ್ನು ಬಿಡಲಿಲ್ಲ. ಈ ವಿಡಿಯೋದಲ್ಲಿ ನೀವು ಎಲ್ಲೆಡೆ ದುಬಾರಿ ವಸ್ತುಗಳನ್ನು ನೋಡಬಹುದು. ಇವನು ಹಗಲಿನಲ್ಲಿ ಹೆಚ್ಚಿನ ಸಮಯವನ್ನು ಬಾತ್ರೂಮಿನಲ್ಲೇ ಕಳೆಯುತ್ತಾನೆ. ಜೊತೆಗೆ ಅವನು ತನ್ನ ಕಮೋಡ್ಅನ್ನು ದುಬಾರಿ ಕಾರ್ಪೆಟ್ ನಿಂದ ಅಲಂಕರಿಸಿದ್ದಾನೆ. ಈ ಪ್ರೀತಿಯನ್ನು ನೋಡಿ ಜಗವೇ ಆಶ್ಚರ್ಯ ಪಡುವಂತಿದೆ. ಆದರೆ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಆ ವ್ಯಕ್ತಿಯು ತನ್ನ ಈ ಪ್ರೀತಿಯನ್ನು ಮರೆಮಾಡಿಲ್ಲ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾನೆ.
ಬಾತ್ರೂಮಿನಲ್ಲಿ ಪ್ರೀತಿಯ ಹಾಡು
ಈತನು ಬಾತ್ರೂಮಿನಲ್ಲಿ ಪ್ರೀತಿಯ ಹಾಡುಗಳನ್ನು ಹಾಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ, ಜನರು ಈಗ ಪ್ರೀತಿಗೆ ನಿಜವಾಗಿಯೂ ಮಿತಿಯಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)