ಚೀನಾ ಮೂಲದ ಆ್ಯಪ್ ಮತ್ತು ಗೇಮಿಂಗ್ ಅಪ್ಲಿಕೇಷನ್ಗಳಿಗೆ ಕೇಂದ್ರ ಸರ್ಕಾರ ಬ್ಯಾನ್ ಬಿಸಿ ಮುಟ್ಟಿಸುತ್ತಿದೆ. ಈಗಾಗಲೇ ಸಾಕಷ್ಟು ಅಪ್ಲಿಕೇಷನ್ಗಳನ್ನು ನಿಷೇಧಿಸಲಾಗಿದೆ. ಅದರಲ್ಲೂ ಗೇಮಿಂಗ್ ಅಪ್ಲಿಕೇಷನ್ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಪಬ್ಜಿ ಸಹ ಬ್ಯಾನ್ ಮಾಡಲಾಗಿತ್ತು. ಆ ಆ್ಯಪ್ಅನ್ನೇ ಹೋಲುವ ಇನ್ನೊಂದು ಅಪ್ಲಿಕೇಷನ್ ಅನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು. ಇದೀಗ ಅದೇ ಫೌಜಿ ಸುಶಾಂತ್ ಸಿಂಗ್ ವಿಚಾರವಾಗಿ ಸುದ್ದಿಯಲ್ಲಿದೆ.
ಅರೇ ಗೇಮ್ಗೂ ಸುಶಾಂತ್ಗೂ ಎಲ್ಲಿಂದ ಎಲ್ಲಿಯ ಸಂಬಂಧ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಅಂದರೆ, ಈ ಗೇಮ್ನಲ್ಲಿ ಸೈನಿಕನಾಗಿ ಪಾತ್ರದಲ್ಲಿ ಸುಶಾಂತ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಸುಶಾಂತ್ ಅವರ ಮುಖವನ್ನೇ ಗೇಮ್ನಲ್ಲಿ ಬಳಸಿಕೊಂಡು ನಾಯಕ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೆಲ್ಲ ವದಂತಿಗಳಿಗೆ ಗೇಮ್ ಅಭಿವೃದ್ಧಿಪಡಿಸಿದ ತಂಡ ತೆರೆಎಳೆದಿದೆ.
‘ಇದೊಂದು ತಳಬುಡ ಇಲ್ಲದ ಸುದ್ದಿ. ಸುಶಾಂತ್ ಸಿಂಗ್ ಅವರ ಮುಖವನ್ನೇ ಹೋಲುವ ಫೋಟೋವನ್ನು ನಾವು ಬಳಿಸಿಕೊಂಡಿಲ್ಲ. ಶಟರ್ ಸ್ಟಾಕ್ ಸಂಸ್ಥೆ ಕಡೆಯಿಂದ ಬೇರೆಯದೇ ಫೋಟೋವನ್ನು ಪಡೆದುಕೊಂಡು ಗೇಮ್ ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ ಇದು ಪೋಸ್ಟರ್ ಅಷ್ಟೇ ಇನ್ನೂ ಹಲವು ವಿಶೇಷತೆಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ‘ಮಾದಕ’ ನಟಿ ರಾಗಿಣಿ ಮತ್ತೆ 5 ದಿನ ಸಿಸಿಬಿ ವಶಕ್ಕೆ
ಪ್ರಧಾನಿ ಮೋದಿಯ ಆತ್ಮನಿರ್ಭರತಾ ಅಭಿಯಾನಕ್ಕೆ ಸ್ಫೂರ್ತಿ ನೀಡುವ ಮತ್ತು ಅದರಿಂದ ಪ್ರೇರೇಪಿತಗೊಂಡು ಫೌಜಿ ಅಪ್ಲಿಕೇಷನ್ಅನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. ಈ ಗೇಮಿಂಗ್ ಅಪ್ಲಿಕೇಷನ್ ಅಕ್ಟೋಬರ್ ವೇಳೆಗೆ ಎಲ್ಲರಿಗೂ ಲಭ್ಯವಾಗಲಿದ್ದು, ಬೆಂಗಳೂರು ಮೂಲದ ಎನ್ ಕೋರ್ ಸಂಸ್ಥೆ ಇದನ್ನು ಸಿದ್ಧಪಡಿಸಿದೆ.
ಫಿಯರ್ಲೆಸ್ ಆ್ಯಂಡ್ ಯೂನೈಟೆಡ್ ಗಾರ್ಡ್ಸ್ ಎಂಬ ಹೆಸರಿರುವ ಈ ಗೇಮಿಂಗ್ ಆ್ಯಪ್ ಹಲವು ವಿಶೇಷತೆಗಳಿಂದ ಕೂಡಿದ್ದು, ಸೈನಿಕರ ತ್ಯಾಗ ಬಲಿದಾನದ ಬಗ್ಗೆಯೂ ಗೇಮ್ನಲ್ಲಿ ತಿಳಿಸಲಾಗಿದೆಯಂತೆ. ಅಷ್ಟೇ ಅಲ್ಲ ಗೇಮ್ ಸಲುವಾಗಿ ಬಳಕೆ ಮಾಡುವ ನೆಟ್ನಲ್ಲಿ ಶೇ. 20 ಪ್ರತಿಶತದ ಆದಾಯ ನೇರವಾಗಿ ಭಾರತ್ಕೀ ವೀರ್ ಟ್ರಸ್ಟ್ಗೆ ಜಮಾವಣೆಯಾಗಲಿದೆ. (ಏಜೆನ್ಸೀಸ್)