ನ್ಯೂಸ್

ತಂದೆಯನ್ನೇ ಕೊಂದ ಮಗ, ಹಣ ಕೊಡಲು ನಿರಾಕರಿಸಿದ್ದಕ್ಕೆ ಹತ್ಯೆ...

ನವದೆಹಲಿ: ಹಣ ಕೇಳಿದಾಗ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿದ್ದಾನೆ. ಮಗನಿಂದ ಇರಿತಕ್ಕೊಳಗಾಗಿ ತಂದೆ ಸಾವಿಗೀಡಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಫತೇಪುರ್​ನ ಬೇರಿ ಪ್ರದೇಶದ ಮನೋಹರ್ ಲಾಲ್​ ಮೃತಪಟ್ಟ ವ್ಯಕ್ತಿ. ಈತನ ಪುತ್ರ 29 ವರ್ಷದ ಬಲ್​ವಾನ್​ ಕೊಲೆ ಆರೋಪಿ. ಭಾನುವಾರ ಭೀಮ್​ ಬಸ್ತಿ ಎಂಬಲ್ಲಿ ಈ ಕೃತ್ಯ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಣಕಾಸಿನ ವಿಚಾರವೊಂದಕ್ಕೆ ಸಂಬಂಧಿಸಿ ತಂದೆ ಹಾಗೂ ಮಗನ ನಡುವೆ ವಾಗ್ವಾದ ಉಂಟಾಗಿತ್ತು. ಮಗ ಹಣ ಕೇಳಿದರೂ ತಂದೆ ಕೊಡಲು ನಿರಾಕರಿಸಿದ್ದರಿಂದ ಸಿಟ್ಟಾಗಿ ಹರಿತವಾದ ಆಯುಧದಿಂದ ಪದೇಪದೆ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ತಂದೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್)