ನ್ಯೂಸ್

8 ವರ್ಷದ ಮಗನಿಂದ ತಂದೆಗೆ ಬೆದರಿಕೆಯ ಪತ್ರ; 'ಐರನ್ ಮ್ಯಾನ್' ಸಿನಿಮಾ ವೀಕ್ಷಿಸಲು ಅನುಮತಿ ನೀಡದೆ ಹೋದಲ್ಲಿ ನಿಮ್ಮ ಸಾವು ಖಚಿತ..!

ನವದೆಹಲಿ: 8 ವರ್ಷದ ಬಾಲಕನೋರ್ವ ತನ್ನ ತಂದೆಗೆ ಬರೆದ ಬೆದರಿಕೆಯ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಪತ್ರದಲ್ಲಿರುವ ಬರವಣಿಗೆಯನ್ನು ನೋಡಿದ ತಕ್ಷಣವೇ ಪುಟ್ಟ ಬಾಲಕನಿಂದಲೇ ಬರೆದ ಪತ್ರವಿದು ಅನ್ನೋದು ತಿಳಿಯುತ್ತೆ.


ಬಾಲಕ ಬರೆದಿರುವ ಪತ್ರದಲ್ಲಿ, ಮೊದಲಿದೆ ತನ್ನ ತಂದೆಯ ಹೆಸರಿದೆ. ಆತ್ಮೀಯ ಜೋಯಲ್ ಬೆರ್ರಿ, ನಿಮ್ಮ ಮಕ್ಕಳಿಗಾಗಿ ನೀವು ಇಂದು ರಾತ್ರಿ ಐರನ್ ಮ್ಯಾನ್ ಅನ್ನು ವೀಕ್ಷಿಸಲು ಅವರಿಗೆ ಅವಕಾಶ ನೀಡಬೇಕು. ಅನುಮತಿ ನೀಡದೇ ಹೋದಲ್ಲಿ ನಿಮ್ಮ ಸಾವು ಖಚಿತ. ಅದರ ಕೆಳಗೆ From, government ಅಂತ ಬರೆದಿದ್ದಾನೆ ಪುಟ್ಟ ಬಾಲಕ. ಅಂದ್ರೆ ಇದು ಸರ್ಕಾರವೇ ನಿಮಗೆ ಬರೆಯುತ್ತಿರುವ ಪತ್ರ ಇದನ್ನ ಕಡೆಗಣಿಸಬೇಡಿ ಮಕ್ಕಳಿಗೆ ಸಿನಿಮಾ ನೋಡಲು ಅನುಮತಿ ನೀಡಬೇಕು ಅನ್ನೋದು ಪತ್ರ ಬರೆದಿರುವುದರ ಪ್ರಮುಖ ಉದ್ದೇಶವಾಗಿದೆ.


ಮಗ ಬರೆದ ಪತ್ರವನ್ನ ಬೆರ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಯಿಸಿದ್ದಾರೆ. ಟ್ವಿಟ್ಟರ್​​​ನಲ್ಲಿ ಶೇರ್​​ ಮಾಡಲಾದ ಪೋಸ್ಟ್​​ 80 ಸಾವಿರಕ್ಕೂ ಹೆಚ್ಚಿನ ಲೈಕ್​​ ಪಡೆದುಕೊಂಡಿದೆ.


ಈ ಬಾಲಕ ತುಂಬಾ ಮುದ್ದಾಗಿ ಪತ್ರವನ್ನ ಬರೆದಿದ್ದಾನೆ, ಈ ಪತ್ರವನ್ನ ನೋಡಿದ್ರೆ ನಾನು ಒಂದು ದಿನ ತಂದೆಯಾಗಬೇಕು ಅನಿಸುತ್ತದೆ ಎಂದು ಓರ್ವ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.


ಅಂತಿಮವಾಗಿ ಮಗನಿಗೆ ಐರನ್ ಮ್ಯಾನ್ ಅನ್ನು ವೀಕ್ಷಿಸಿದರು ಅನುಮತಿ ನೀಡಿರುವ ಪೋಸ್ಟ್​​ ಒಂದನ್ನೂ ಜೋಯಲ್ ಬೆರ್ರಿ, ತಮ್ಮ ಟ್ವಿಟ್ಟರ್​​​ನಲ್ಲಿ ಹಂಚಿಕೊಂಡಿದ್ದಾರೆ. ಮಗ ಟಿವಿಯಲ್ಲಿ ಇರನ್​​ ಮ್ಯಾನ್​​ ಸಿನಿಮಾ ನೋಡುತ್ತಿರುವ ಚಿತ್ರವನ್ನ ಹಂಚಿಕೊಂಡ ಬೆರ್ರಿ, ಸರ್ಕಾರವು ಈ ಸುತ್ತನ್ನು ಗೆದ್ದಿದೆ ಎಂದು ಬರೆದಿದ್ದಾರೆ.


ಬಾಲಕ ಬರೆದಿರುವ ಈ ಪತ್ರವನ್ನ ಫ್ರೇಮ್​ ಮಾಡಿಸಿ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.