ನ್ಯೂಸ್

ಮಗಳ ಮದುವೆಯಲ್ಲಿ ಹೃದಯಘಾತದಿಂದ ತಂದೆ ಮೃತ: ಶೋಕ ಸಾಗರದಲ್ಲಿ ಮುಳುಗಿದ ಕುಟುಂಬ | Heart attack

Heart attack:ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಯಾದ ಸ್ವಲ್ಪ ಸಮಯದ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿರುವ ಘಟನೆ ತೆಲಂಗಾಣದ ಬಿಕ್ಕನೂರ್ ಮಂಡಲದ ರಾಮೇಶ್ವರಪಲ್ಲಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ರಾಮೇಶ್ವರಪಲ್ಲಿ ಗ್ರಾಮದ ನಿವಾಸಿ ಬಾಲಚಂದ್ರಂ ಮೃತ ದುರ್ದೈವಿ. ಮದುವೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮದುವೆ ಮಂಟಪದಲ್ಲಿ ಕುಸಿದು ಬಿದ್ದರು. ಅವರನ್ನು ಸಮೀಪಿದ ಕಾಮರೆಡ್ಡಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.

ಇನ್ನು ಕೆಲವೇ ಕ್ಷಣಗಳ ಹಿಂದೆ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಸಂಬಂಧಿಕರು ಮತ್ತು ಅತಿಥಿಗಳು ಆಘಾತಕ್ಕೊಳಗಾಗಿದ್ದಾರೆ.(ಏಜೆನ್ಸೀಸ್​)