ನ್ಯೂಸ್

ತನ್ನ ಮಕ್ಕಳನ್ನು ತಾನೇ ಸಾಕಬೇಕು ಎಂದು ಕಾನೂನು ಪ್ರಕಾರ ಲಿಂಗ ಬದಲಾಯಿಸಿದ ವಿಚ್ಛೇದಿತ ತಂದೆ!

ನವದೆಹಲಿ: ಇಲ್ಲೊಬ್ಬ ವಿಚ್ಛೇದಿತ ವ್ಯಕ್ತಿ ತನ್ನ ಹೆಣ್ಣುಮಕ್ಕಳನ್ನು ವಶಕ್ಕೆ ಪಡೆಯಲು ತನ್ನ ಲಿಂಗವನ್ನು ಬದಲಾಯಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

47 ವರ್ಷದ ರೆನೆ ಸಲಿನಾಸ್ ರಾಮೋಸ್, ತನ್ನ ಪತ್ನಿಯೊಂದಿಗೆ ವಾಸಿಸುತ್ತಿರುವ ಹೆಣ್ಣುಮಕ್ಕಳನ್ನು ಕಸ್ಟಡಿಗೆ ಪಡೆಯಲುಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ರಾಮೋಸ್, ಮಕ್ಕಳ ಕಸ್ಟಡಿ ವಿಚಾರಕ್ಕೆ ಬಂದಾಗ ಅವರ ದೇಶದ ಕಾನೂನುಗಳು ಪುರುಷರಿಗಿಂತ ತಾಯಂದಿರನ್ನು ಹೆಚ್ಚು ಬೆಂಬಲಿಸುತ್ತದೆ. ಆದ್ದರಿಂದ, ಅವರು ಕಾನೂನುಬದ್ಧವಾಗಿ ಮಹಿಳೆಯಾಗಲು ನಿರ್ಧರಿಸಿದರು. ಅವರ ಅಧಿಕೃತ ದಾಖಲೆಗಳು ಈಗ ಅವರನ್ನು ಮಹಿಳೆ ಎಂದೇ ಗುರುತಿಸುತ್ತಿವೆ.

ಹೆಣ್ಣುಮಕ್ಕಳು ತಮ್ಮ ತಾಯಿಯೊಂದಿಗೆ ಕೆಟ್ಟ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ ಎಂದು ರಾಮೋಸ್ ಆರೋಪಿಸಿದ್ದು ಐದು ತಿಂಗಳಿನಿಂದ ತನ್ನ ಮಕ್ಕಳನ್ನು ಭೇಟಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

"ಕಾನೂನು, ಮಕ್ಕಳನ್ನು ಸಾಕುವ ಹಕ್ಕು ಇರುವವಳು ಮಹಿಳೆ ಎಂದು ಹೇಳುತ್ತದೆ. ಈ ಕ್ಷಣಕ್ಕೆ ನಾನು ಹೆಣ್ಣಾಗಿದ್ದೇನೆ. ಈಗ ನಾನು ಸಹ ತಾಯಿಯಾಗಿದ್ದೇನೆ" ಎಂದು ರಾಮೋಸ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅವರ, "ನನ್ನ ಲೈಂಗಿಕತೆಯ ಬಗ್ಗೆ ನನಗೆ ಗೊತ್ತಿದೆ. ನಾನು ತಾಯಿಯಾಗಲು ಬಯಸುತ್ತೇನೆ. ಇದರಿಂದ ನಾನು ನನ್ನ ಮಕ್ಕಳಿಗೆ ತಾಯಿಯ ಪ್ರೀತಿ ಮತ್ತು ರಕ್ಷಣೆಯನ್ನು ನೀಡಬಹುದು."

"ಈ ದೇಶದಲ್ಲಿ ಒಬ್ಬ ತಂದೆಯಾದವನಿಗೆ ಶಿಕ್ಷಿಸಲಾಗುತ್ತದೆ. ಗಂಡಸನ್ನು ಕೇವಲ ಪೂರೈಕೆದಾರನಂತೆ ಮಾತ್ರ ನೋಡಲಾಗುತ್ತದೆ" ಎಂದು ಅವರು ತಮ್ಮ ದುಃಖವನ್ನು ಹಂಚಿಕೊಂಡರು.

ರಾಮೋಸ್ ತನ್ನ ಮಕ್ಕಳ ಕಸ್ಟಡಿಯನ್ನು ಪಡೆಯಲು ತನ್ನ ಲಿಂಗವನ್ನು ಬದಲಾಯಿಸುವ ನಿರ್ಧಾರವು ದೇಶದ ಟ್ರಾನ್ಸ್ ಕಾರ್ಯಕರ್ತರನ್ನು ಅಸಮಾಧಾನಗೊಳಿಸಿದೆ. (ಏಜೆನ್ಸೀಸ್)