ನ್ಯೂಸ್

ಚಾತುರ್ಮಾಸ ಉಪವಾಸ ವೃತ ಕೈಗೊಂಡವರಿಗೆ ಮೆರವಣಿಗೆ ಮೂಲಕ ಗೌರವ ಸೂಚನೆ

Haveri - Kariyappa Aralikatti

ರಾಣೆಬೆನ್ನೂರ: ಚಾತುರ್ಮಾಸದ ಅಂಗವಾಗಿ ಜೈನ್ ಸಮುದಾಯ ವತಿಯಿಂದ ನಿರಂತರವಾಗಿ ಉಪವಾಸ ವೃತ ಕೈಗೊಂಡವರ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಬುಧವಾರ ನಡೆಯಿತು.
ಇಲ್ಲಿಯ ವರ್ತಕರ ಸಂಘದ ಎದುರಿನ ಸಮುದಾಯ ಭವನದಿಂದ ಆರಂಭವಾದ ಮೆರವಣಿಗೆ ಸಂಗಮ್ ಸರ್ಕಲ್ ಮೂಲಕ ಗ್ರಂಥಾಲಯ ಪಕ್ಕದಲ್ಲಿರುವ ಜೈನ ಸಮಾಜದ ದೇವಸ್ಥಾನವರೆಗೆ ಸಾಗಿತು.
ನಂತರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಆಚಾರ್ಯ ಮಹೇಂದ್ರಸಾಗರ ಸುರಿಸ್ವರೂಜಿ ಮಾತನಾಡಿ, ಚಾತುರ್ಮಾಸದಲ್ಲಿ ಭಗವಂತನ ಹೆಸರಿನಲ್ಲಿ ಉಪವಾಸ, ವೃತ ಮಾಡುವುದು ಹಾಗೂ ಶರಣರ ಹಿತವಚನಗಳನ್ನು ಆಲಿಸುವ ಧರ್ಮ ಕಾರ್ಯಗಳನ್ನು ಮಾಡುವುದರಿಂದ ಸದ್ಗತಿ ಪ್ರಾಪ್ತಿಯಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಮೇರುಪದ್ಮಸಾಗರ ವಿಜಯೇಜಿ, ಅಹರ್ಂಪದ್ಮಸಾಗರ ವಿಜಯೇಜಿ, ಜೈನ್ ಶ್ವೇತಾಂಬರ ಸಂಘದ ಅಧ್ಯಕ್ಷ ಪ್ರಕಾಶ ಜೈನ, ರಾಜೇಂದ್ರ ಜೈನ, ಮಹೇಂದ್ರ ಬಂಡಾರಿ, ಜಯಂತಿಲಾಲ್ ಜೈನ, ಥಾನಚಂದ ಜೈನ, ಅಶೋಕ ಜೈನ್, ಹುಕ್ಮುಮಿಚಂದ್ ಜೈನ್, ಪ್ರೀತಂ ಜೈನ್, ಅರವಿಂದ ಜೈನ್ ಮತ್ತಿತರರು ಉಪಸ್ಥಿತರಿದ್ದರು.