ನವರಾತ್ರಿ ಅಂಗವಾಗಿ ಸೊರಬದ ಶ್ರೀ ರಂಗನಾಥ ದೇವಾಲಯದ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಶಿವಶಕ್ತಿ ಸಹಸ್ರ ದೇವಿ ದರ್ಶನ ಮೇಳ ಆಯೋಜಿಸಿರುವುದು. 
ನ್ಯೂಸ್

ಆಕರ್ಷಕ ಶಿವಶಕ್ತಿ ದರ್ಶನ ಮೇಳ

ಸೊರಬ: ಪಟ್ಟಣದ ಚಾಮರಾಜಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಿವಶಕ್ತಿ ಸಹಸ್ರ ದೇವಿ ದರ್ಶನ ಮೇಳದಲ್ಲಿ ಸಾವಿರಾರು ಜನರು ದೇವರ ದರ್ಶನ ಪಡೆದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ದೇವಿ ದರ್ಶನ ಪಡೆದು ಬ್ರಹ್ಮಕುಮಾರಿ ಸಂಸ್ಥೆಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜಯೋಗಿನಿ ಬ್ರಹ್ಮಕುಮಾರಿ ಚೇತನಕ್ಕ ಅವರು ಸಚಿವರನ್ನು ಸನ್ಮಾನಿಸಿದರು.

ಕಾನಕೇರಿಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಶಕ್ತಿ ದೇವಿಯರ ದಿವ್ಯ ಅಲಂಕಾರ ವಿಶೇಷವಾಗಿದ್ದು, ಬ್ರಹ್ಮಕುಮಾರಿ ಸಂಸ್ಥೆಯವರ ಆಧ್ಯಾತ್ಮಿಕ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.

ಸಹಸ್ರಾರು ದೇವಿಯರನ್ನು ಒಂದೇ ಸ್ಥಳದಲ್ಲಿ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟು, ಪ್ರತಿನಿತ್ಯ ದಿವ್ಯ ಪ್ರದರ್ಶನ ನೀಡುವುದು ವಿಶೇಷ. ಮಕ್ಕಳು, ಮಹಿಳೆಯರೂ ಸೇರಿ ಜನರು ತಾಲೂಕಿನ ವಿವಿಧೆಡೆಯಿಂದ ಆಗಮಿಸಿ ವೀಕ್ಷಿಸುತ್ತಿದ್ದಾರೆ. ಸುಂದರ, ಆಕರ್ಷಕ ಶಿವಶಕ್ತಿ ದರ್ಶನ ಮೇಳ ವಿಜಯದಶಮಿಯಂದು ಮುಕ್ತಾಯವಾಗಲಿದೆ.