ಬೈಲಹೊಂಗಲದಲ್ಲಿ ಧರಣಿನಿರತ ರೈತರೊಂದಿಗೆ ಎಸಿ ಪ್ರವಿಣ ಜೈನ ಮಾತುಕತೆ ನಡೆಸಿದರು. ನಿಂಗಪ್ಪ ಚೌಡನ್ನವರ, ಶಂಕರ ಮಾಡಲಗಿ, ಸಂಗಯ್ಯ ದಾಬಿಮಠ, ಶ್ರೀಶೈಲ ಚೌಡನ್ನವರ ಇತರರಿದ್ದರು. 
ನ್ಯೂಸ್

ಅಹೋರಾತ್ರಿ ಧರಣಿ ಹಿಂಪಡೆದ ರೈತರು

ಬೈಲಹೊಂಗಲ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು ಖರೀದಿಗೆ ಸರ್ಕಾರ ಹಾಗೂ ನೆಫೆಡ್​ ಸಂಸ್ಥೆ ವಿಧಿಸಿರುವ ತೇವಾಂಶ ಮತ್ತು ಕಾಳಿನ ಗುಣಮಟ್ಟ ಮಾನದಂಡ ಸಡಿಲಿಕೆಗೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ನಗರದಲ್ಲಿ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಮಂಗಳವಾರ ಹಿಂಪಡೆಯಲಾಗಿದೆ.
ರೈತರು ಸ್ಥಳಕ್ಕೆ ಡಿಸಿ ಆಗಮಿಸುವಂತೆ ಬಿಗಿಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಎಸಿ ಪ್ರವಿಣ ಜೈನ ಮಾತನಾಡಿ, ಬೇಡಿಕೆ ಈಡೇರಿಸಲು ನಾಲ್ಕು ದಿನ ಕಾಲಾವಕಾಶ ಕೇಳಿದ್ದರಿಂದ ಬರುವ ಸೋಮವಾರದವರೆಗೆ ಗಡುವು ನೀಡಿ ಅಹೋರಾತ್ರಿ ಧರಣಿ ಹಿಂಪಡೆದು, ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಪ್ರತಿಭಟನೆಗೆ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ನಿಂಗಪ್ಪ ಚೌಡನ್ನವರ, ಶಂಕರ ಮಾಡಲಗಿ, ಸಂಗಯ್ಯ ದಾಬಿಮಠ ಹಾಗೂ ಶ್ರೀಶೈಲ ಚೌಡನ್ನವರ ಮಾತನಾಡಿ, ಹೆಸರು, ಉದ್ದು ಖರೀದಿ ಕೇಂದ್ರಗಳಲ್ಲಿ ಕಾಳು ಕಳಪೆಯಾಗಿವೆ ಎಂದು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸಿಎಂ ಮತ್ತು ಸಚಿವರಿಗೆ ಕೇವಲ ಕಬ್ಬು ಕಾಣುತ್ತಿದೆ ಉಳಿದ ಬೆಳೆಗಳು ಕಾಣುತ್ತಿಲ್ಲ. 2017ರಿಂದಲೂ ಬೆಳೆವಿಮೆ ಪರಿಹಾರ ಸಿಕ್ಕಿಲ್ಲ. ಪ್ರತಿ ಎಕರೆಗೆ 25 ಸಾವಿರ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸುನೀಲ ಗೊಡಬೊಲೆ, ಎಚ್​.ಎನ್​.ಶಿರಹಟ್ಟಿ, ಡಾ.ವೀರಯ್ಯ ಹಿರೇಮಠ, ಬಸವರಾಜ ದಳವಾಯಿ, ಮುಖಂಡರಾದ ಶಂಕರ ಬೋಳನ್ನವರ, ಎ್​.ಎಸ್​.ಸಿದ್ದನಗೌಡರ, ಉದಯ ಕೊಟಬಾಗಿ, ಪ್ರವಿಣ ಹಿರೇಮಠ, ನಾಗಪ್ಪ ಸವದತ್ತಿ, ಬಸವರಾಜ ಮುರಗೋಡ, ರಾಮಲಿಂಗಪ್ಪ ಯರಿಕಿತ್ತೂರ, ಈರಪ್ಪ ಚೌಡನ್ನವರ, ಗುರುನಾಥ ಕಾರಕೂನ, ಮಡಿವಾಳಪ್ಪ ಕುರಿ ಇತರರಿದ್ದರು.