ನ್ಯೂಸ್

ರೈತ ಪ್ರತಿಭಟನೆಯ ವೇದಿಕೆ ಮೇಲೆ ಗೋಚರಿಸಿತು ನಕ್ಸಲ್ ಹಿತೈಷಿಗಳ ಬಿಡುಗಡೆಗೆ ಒತ್ತಾಯಿಸಿದ ಬ್ಯಾಕ್​ಡ್ರಾಪ್​ !

ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ, ಅವರಿಗೆ ಬೆಂಬಲ ನೀಡುತ್ತೇವೆ ಎನ್ನುತ್ತ ಸೇರಿಕೊಂಡವರೆಲ್ಲ ತಮ್ಮ ತಮ್ಮ ಬೇಳೆ ಬೇಯಿಸೋ ಪ್ರಯತ್ನ ನಡೆಸಿದ್ದಾರೆ.

ಇದರ ಫಲವೋ ಏನೋ ಎಂಬಂತೆ ತ್ರಿಕ್ರಿ ಬಾರ್ಡರ್​ನಲ್ಲಿ ಪ್ರತಿಭಟನಾ ನಿರತ ರೈತ ಸಂಘಟನೆಯ ವೇದಿಕೆ ಮೇಲೆ ನಕ್ಸಲ್ ಹಿತೈಷಿ, ದೇಶ ವಿರೋಧಿ ಘೋಷಣೆ ಕೂಗಿದವರ ಬಿಡುಗಡೆಗೆ ಆಗ್ರಹಿಸಿದ ಬ್ಯಾಕ್​ ಡ್ರಾಪ್ ಕಾಣಿಸಿಕೊಂಡಿದೆ! ಅಷ್ಟೇ ಅಲ್ಲ, ಒಂದು ಗುಂಪು ಈ ನಕ್ಸಲ್ ಹಿತೈಷಿ, ದೇಶ ವಿರೋಧಿ ಘೋಷಣೆ ಕೂಗಿದವರ ಫೊಟೋಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂತು.

ಎಲ್ಗಾರ್ ಪರಿಷದ್ ಕೇಸ್​ ಮತ್ತು ದೆಹಲಿ ಗಲಭೆ ಕೇಸ್​ನಲ್ಲಿ ಬಂಧಿತರಾದವರ ಫೋಟೋಗಳವು. ಯುಎಪಿಎ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರಾದವರ ಬಿಡುಗಡೆ ಆಗ್ರಹಿಸಿದ ಧ್ವನಿ ತ್ರಿಕ್ರಿ ಬಾರ್ಡರ್​ನಲ್ಲಿ ನಿನ್ನೆ ಅನುರಣಿಸಿತ್ತು. ವರವರ ರಾವ್​, ಉಮರ್​ ಖಾಲಿದ್, ಶಾರ್ಜೀಲ್​ ಇಮಾಮ್ ಮತ್ತು ಇತರರ ಬಿಡುಗಡೆಗೆ ಅಲ್ಲಿದ್ದವರು ಆಗ್ರಹಿಸಿ ಘೋಷಣೆ ಕೂಗಿದ್ದು ಗಮನಸೆಳೆದಿತ್ತು. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..