ರಾಣೆಬೆನ್ನೂರ: ಬಿತ್ತನೆ ಬೀಜ ಖರೀದಿಸಿ ಮೋಸ ಹೋಗಿರುವ ರೈತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಅಂಗಡಿಕಾರರು ಮಾರಾಟ ಮಾಡಿದ ಬೀಜಗಳನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ತನಿಖೆ ಆರಂಭವಾಗಲಿದೆ. ಆದರೆ, ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಇಲ್ಲಿಯ ಅಂಗಡಿಕಾರರಿಂದ ಕಳಪೆ ಬೀಜ ಖರೀದಿಸಿ ಮೋಸ ಹೋಗಿರುವ ಬೇರೆ ಬೇರೆ ಜಿಲ್ಲೆಯ ರೈತರು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳಪೆ ಬೀಜ ನೀಡಿದ್ದಾರೆ ಎಂದು ರೈತರು ಆರೋಪಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕು ಮಳಿಗೆಗಳಿಗೆ ಬೀಗ ಮುದ್ರೆ ಹಾಕಿ ಅವರ ಪರವಾನಗಿ ರದ್ದುಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಅಂಗಡಿಕಾರರ ವಿರುದ್ಧ ತನಿಖೆ ನಡೆಸುವ ಉದ್ದೇಶದಿಂದ ಎ್ಐಆರ್ ದಾಖಲಿಸಿ ರೈತರಿಗೆ ಅವರು ನೀಡಿರುವ ಬಿತ್ತನೆ ಬೀಜಗಳ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ರೈತರು ಬಿಲ್ಗಳನ್ನು ಇಟ್ಟುಕೊಂಡು ಗ್ರಾಹಕರ ವೇದಿಕೆಗೆ ದೂರು ದಾಖಲಿಸಬಹುದು. ರೈತರಿಗೆ ಆಗಿರುವ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಲಾಗುವುದು. ನಂತರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಬಿ.ಸಿ. ಪಾಟೀಲರು ಕೃಷಿ ಸಚಿವರಾಗಿದ್ದ ಸಮಯದಲ್ಲಿ ಬ್ಯಾಡಗಿಯಲ್ಲಿ 1.63 ಲಕ್ಷ ಟನ್ನಷ್ಟು ಖುಲ್ಲಾ ಬೀಜ ವಶಪಡಿಸಿಕೊಳ್ಳಲಾಗಿತ್ತು. ಒಬ್ಬ ವ್ಯಾಪಾರಿ 1600 ರೂ.ಗೆ ಇರುವ ಬೀಜಗಳನ್ನು 600 ರೂ.ಗೆ ಕೊಡುತ್ತಿದ್ದಾನೆ ಎಂದರೆ ರೈತರು ಅದನ್ನು ಖರೀದಿಸುವ ಮುನ್ನ ಕೃಷಿ ಅಧಿಕಾರಿಗಳಿಗೆ ಅಥವಾ ತಮ್ಮಲ್ಲಿಯೆ ಆ ಬೀಜಗಳು ಎಷ್ಟು ಕ್ವಾಲಿಟಿ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದರೆ ಮೋಸ ಹೋಗುವುದು ಗ್ಯಾರಂಟಿ ಆಗುತ್ತದೆ. ಮುಂದಿನ ದಿನದಲ್ಲಾದರೂ ರೈತರು ಕಳಪೆ ಬೀಜ, ಕಡಿಮೆ ಬೆಲೆಗೆ ಬೀಜ ಮಾರಾಟ ಮಾಡುವುದು ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮೋಸ ಹೋಗುವುದನ್ನು ತಡೆಯಬೇಕು ಎಂದರು.
ಎಎಸ್ಪಿ ಲಕ್ಷ$್ಮಣ ಶಿರಕೋಳ, ಕೃಷಿ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ., ತಹಸೀಲ್ದಾರ್ ಆರ್.ಎಚ್. ಭಾಗವಾನ್, ಡಿವೈಎಸ್ಪಿ ಲೋಕೇಶ ಜೆ., ರೈತ ಸಂದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ಮತ್ತಿತರರಿದ್ದರು.
ಪ್ರತಿಭಟನಾ ಮೆರವಣಿಗೆ...
ರಾಣೆಬೆನ್ನೂರ ನಗರದಲ್ಲಿ ಕಳಪೆ ಬೀಜ ಮಾರಾಟ ಸಂರ್ಪೂಣ ತಡೆಯಬೇಕು. ಕಳಪೆ ಬೀಜದಿಂದ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಕೋರ್ಟ್ ವೃತ್ತದಿಂದ ಕೃಷಿ ಸಹಾಯಕ ನಿರ್ದೇಶಕರ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಸಭೆ ನಡೆಸಲಾಯಿತು.