ರಾಣೆಬೆನ್ನೂರ: ರಾಣೆಬೆನ್ನೂರ ಸೇರಿ ಸುತ್ತಲಿನ ಪ್ರದೇಶದಲ್ಲಿ ತಾಳೆ ಬೆಳೆ ಬೆಳೆಯಲು ಉತ್ತಮ ವಾತಾವರಣವಿದ್ದು, ರೈತರು ಹೆಚ್ಚು ಆಸಕ್ತಿ ವಹಿಸಿ ತಾಳೆ ಬೆಳೆ ಬೆಳೆಯಬೇಕು. ಇದು ಕಡಿಮೆ ಖಚಿರ್ನ ನಿರ್ವಹಣೆ ಜತೆಗೆ ಹೆಚ್ಚು ಲಾಭ ನೀಡುವ ಬೆಳೆಯಾಗಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನೂರಅಹ್ಮದ್ ಹಲಗೇರಿ ಹೇಳಿದರು.
ಜಿಪಂ, ತೋಟಗಾರಿಕೆ ಇಲಾಖೆ ವತಿಯಿಂದ ಶನಿವಾರ ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ತಾಳೆ ಬೆಳೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಳೆ ಬೆಳೆಗೆ ಯಾವುದೆ ರೋಗ ಬಾಧೆ ಇರುವುದಿಲ್ಲ. ಈ ಬೆಳೆ ಬೆಳೆಯಲು ಕೇಂದ್ರ ಸರ್ಕಾರದ ಅನುದಾನದಲ್ಲಿ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ಮೂರು ವರ್ಷಗಳ ವರೆಗೆ ಗೊಬ್ಬರ ನಿರ್ವಹಣೆಗಾಗಿ ರೈತರ ಖಾತೆಗೆ ಸಹಾಯಧನ ನೀಡಲಾಗುತ್ತದೆ. ಹಣ್ಣು ಕಟಾವು ಯಂತ್ರ ಖರೀದಿಗೆ ಹಾಗೂ ಬೊರವೆಲ್ಗಾಗಿ ನರೇಗಾ ಯೋಜನೆಯಡಿ ಸಹಾಯಧನ ದೊರೆಯುತ್ತದೆ. ಆದ್ದರಿಂದ ರೈತರು ಹೆಚ್ಚು ಆಸಕ್ತಿ ವಹಿಸಬೇಕು ಎಂದರು.
ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಜಿಯಾ , ಭಾರತಿ ಮಲಜೂರೆ, ತಾಲೂಕು ತಾಳೆ ಬೆಳೆ ಕ್ಷೇತ್ರದ ಅಧಿಕಾರಿ ಹನುಮಂತಪ್ಪ ಅಸುಂಡಿ, ರೈತರಾದ ಗಣೇಶ ಬಿಲ್ಲಾಳ, ನಾಗಪ್ಪ ಯಲಿಗಾರ, ವಾಗೀಶ ಹುಲ್ಲತ್ತಿ, ಸತೀಶ ಹುಲ್ಲತ್ತಿ, ಸುರೇಶ ನಾಯ್ಕರ, ಹನುಮಂತಪ್ಪ ರಡ್ಡೇರ, ಬಸವರಾಜ ಕೊಪ್ಪದ, ಲಿಂಗರಾಜ ರಡ್ಡೇರ ಮತ್ತಿತರರು ಉಪಸ್ಥಿತರಿದ್ದರು.