ನ್ಯೂಸ್

ರೈತರು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಿ

ಹಾವೇರಿ: ಎಲ್ಲ ರೈತ ಬಾಂಧವರು ತಪ್ಪದೆ ಕಾಲುಬಾಯಿ ರೋಗ ಹಾಗೂ ಚರ್ಮಗಂಟು ರೋಗದ ಲಸಿಕೆಯನ್ನು ತಮ್ಮ ಜಾನುವಾರುಗಳಿಗೆ ಹಾಕಿಸಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಜತೆಗೆ ಸಹಕರಿಸಬೇಕು. ಇದರಿಂದ ಜಾನುವಾರುಗಳಿಗೆ ರೋಗ ಬರದಂತೆ ತಡೆಗಟ್ಟಬಹುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ನಗರದ ಪಶು ಆಸ್ಪತ್ರೆಯಲ್ಲಿ ಶನಿವಾರ ಏಳನೇ ಸುತ್ತಿನ ಕಾಲುಬಾಯಿ ಮತ್ತು ಚರ್ಮಘಂಟು ರೋಗದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಶು ಸಂಗೋಪನೆ ರೈತನ ಬೆನ್ನೆಲುಬಾಗಿದ್ದು ಹಾಗೂ ದೇಶದ ಆಥಿರ್ಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಪರಮೇಶ ಹುಬ್ಬಳ್ಳಿ, ಡಾ. ಮಹಮ್ಮದ ಬೂದಿಹಾಳ, ಡಾ. ಪ್ರವಿಣ ಸೂಕ್ತೆ ಹಾಗೂ ಸಿಬ್ಬಂದಿ ಇದ್ದರು.