ಬಾಳೆಹೊನ್ನೂರು: ಮಲೆನಾಡು ಭಾಗದಲ್ಲಿ ಈ ಬಾರಿ ಮಳೆಯ ಪ್ರಮಾಣ ಕುಂಠಿತವಾಗಿದ್ದು ಹವಾಮಾನ ಏರುಪೇರಿನಿಂದಾಗಿ ರೈತರ ಜೀವನ ಸಂಕಷ್ಟಕ್ಕೀಡಾಗಿದೆ ಎಂದು ಪಿಎಸಿಎಸ್ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೋಮವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ರೈತರು ಇಂದು ಹಲವು ಸವಾಲುಗಳ ನಡುವೆ ಕೃಷಿ ಚಟುವಟಿಕೆ ನಡೆಸಬೇಕಾಗಿದೆ. ರಸಗೊಬ್ಬರ ಬೆಲೆ ಏರಿಕೆ, ಕೂಲಿ ಕಾರ್ಮಿಕರ ಕೊರತೆ, ಅತಿವೃಷ್ಟಿ, ಅನಾವೃಷ್ಟಿಗಳ ನಡುವೆ ಬೆಳೆಗಳನ್ನು ಬೆಳೆಯಬೇಕಾಗಿದೆ ಎಂದರು.
ಬಾಳೆಹೊನ್ನೂರು ಪಿಎಸಿಎಸ್ 2022-23ನೇ ಸಾಲಿನಲ್ಲಿ 35.38 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ರೈತರಿಗೆ ನೀಡಿದ ಸಾಲ ಶೇ.99ರಷ್ಟು ವಸೂಲಾತಿಯಾಗಿದೆ. ಸದಸ್ಯರಿಗೆ ಸರ್ಕಾರ ಮತ್ತು ಸಹಕಾರ ಸಂಘದಿಂದ ದೊರೆಯುವ ಉತ್ತಮ ಗುಣಮಟ್ಟದ ಸೇವೆಗಳನ್ನು, ಗ್ರಾಹಕ ಸ್ನೇಹಿ ಸೌಲಭ್ಯ ತಲುಪಿಸುತ್ತ ಉತ್ತಮ ವ್ಯಾಪಾರ ವಹಿವಾಟುಗಳೊಂದಿಗೆ ಲಾಭ ಗಳಿಸುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ಸಿ.ಚಂದ್ರಶೇಖರ್, ನಿರ್ದೇಶಕರಾದ ಕೆ.ಕೆ.ವೆಂಕಟೇಶ್, ಕೆ.ಟಿ.ವೆಂಕಟೇಶ್, ಕೆ.ಟಿ.ಗೋವಿಂದೇಗೌಡ, ಸುಧಾ, ಬಿ.ರಾಜಪ್ಪಗೌಡ, ಹಿರಿಯಣ್ಣ, ಇ.ಚಂದ್ರಶೇಖರ್, ಎಂ.ಡಿ.ಕೃಷ್ಣಪ್ಪ, ಸಿಇಒ ಎಚ್.ಉಮೇಶ್, ಸಿಬ್ಬಂದಿ ಎಚ್.ಎಂ.ವೆಂಕಟೇಶ್, ಸತೀಶ್, ರಾಜೇಂದ್ರ, ಅಣ್ಣಪ್ಪ ಇತರರಿದ್ದರು