ನ್ಯೂಸ್

ರೈತರ ಬಹುಕಾಲದ ಬೇಡಿಕೆ ಈಡೇರಿದೆ; ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಸಮರ್ಥನೆ

ಹರೀಶ್​​ ಕೆ.ಸಿ.

ನವದೆಹಲಿ: ಕೃಷಿಗೆ ಸಂಬಂಧಿ ಸಿದ ಮೂರು ನೂತನ ಕಾನೂನು ಗಳು ರೈತರ ಬಹುಕಾಲದ ಬೇಡಿಕೆಯನ್ನು ಈಡೇರಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ’ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಈ ಕಾಯ್ದೆಗಳು ಲಾಭದಾಯಕವಾಗಿದ್ದರೂ ರೈತರು ಅನವಶ್ಯಕವಾಗಿ ಪ್ರತಿಭಟನೆ ನಡೆಸುತ್ತಿರುವುದು ಸೋಜಿಗ. ರೈತರು ಪ್ರತಿಭಟನೆ ನಡೆಸಲೇ ಬೇಕೆಂದಿದ್ದರೆ ಧರಣಿಯನ್ನು ಬುರಾರಿಯ ಸಂತ ನಿರಂಕಾರಿ ಮೈದಾನಕ್ಕೆ ಸ್ಥಳಾಂತರಿಸಬೇಕು. ಸಂಸತ್​ನಲ್ಲಿ ವಿಸõತವಾಗಿ ಚರ್ಚೆ ನಡೆದು ಅನುಮೋದನೆ ನೀಡಿದ ನಂತರವೇ ಕಾಯ್ದೆಗಳು ಜಾರಿಯಾಗಿವೆ. ಈ ಕಾಯ್ದೆಗಳು ರೈತರನ್ನು ಅಚಲರನ್ನಾಗಿಸುವುದರ ಜತೆಗೆ ಹೊಸ ಹಕ್ಕು ಮತ್ತು ವಿಫುಲ ಅವಕಾಶವನ್ನು ಕಲ್ಪಿಸಿವೆ. ಇದರಿಂದ ರೈತರ ಸಮಸ್ಯೆಗಳು ಶೀಘ್ರದಲ್ಲೇ ಪರಿಹಾರ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಫಸಲು ಖರೀದಿಸಿದ ಮೂರು ದಿನದಗಳೊಗೆ ಹಣ ಪಾವತಿ ಮಾಡದ ಮಹಾರಾಷ್ಟ್ರದ ವರ್ತಕನ ವಿರುದ್ಧ ರೈತ ಹೊಸ ಕಾಯ್ದೆಯನ್ನುಝುಳಪಿಸಿ ದುಡ್ಡು ಪಡೆದ ರೈತನನ್ನು ಸ್ಮರಿಸಿದರು.

  • ವಾರಾಣಸಿಯಿಂದ 1913ರಲ್ಲಿ ಕಳವಾಗಿದ್ದ ಅನ್ನಪೂರ್ಣಾದೇವಿ ವಿಗ್ರಹವನ್ನು ಕೆನಡಾದಿಂದ ಭಾರತಕ್ಕೆ ವಾಪಸು ತರಲಾಗಿದೆ.
  • ಹಳೆಯ ವಿದ್ಯಾರ್ಥಿಗಳನ್ನು ನವೀನ ವೇದಿಕೆ ಮತ್ತು ಹೊಸ ಪರಿಕಲ್ಪನೆಯಲ್ಲಿ ತೊಡಗಿಸಿಕೊಂಡು ಅವರ ಸಾಮರ್ಥ್ಯದ ಲಾಭವನ್ನು ಶಿಕ್ಷಣ ಸಂಸ್ಥೆಗಳು ಪಡೆಯಬೇಕು.
  • ಕೋವಿಡ್ ಸೋಂಕಿನ ಬಗ್ಗೆ ಉದಾಸೀನ ಮಾಡಿ ಅಪಾಯಕ್ಕೆ ಸಿಲುಕಿಕೊಳ್ಳಬೇಡಿ. ಸೋಂಕಿನ ವಿರುದ್ಧ ಹೋರಾಟ ನಿರಂತರವಾಗಿರಲಿ.
ಸರಿಯಾದ ಮಾಹಿತಿ ಪಡೆದು, ಗಾಳಿಸುದ್ದಿ ಹಾಗೂ ಗೊಂದಲದಿಂದ ಹೊರಗಿರುವುದರಿಂದ ಜನರು ಬಲಗೊಳ್ಳುತ್ತಾರೆ. ಹೊಸ ಹೊಸ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಾರೆ. | ನರೇಂದ್ರ ಮೋದಿ ಪ್ರಧಾನಿ

ಬ್ರೆಜಿಲ್​ನಲ್ಲಿ ಗೀತೆಯ ಬೋಧಕನಿಗೆ ನಮೋ

ಬ್ರೆಜಿಲ್​ನಲ್ಲಿ ಭಗವದ್ಗೀತೆ ಬೋಧಿಸುತ್ತಿರುವ ಜೊನಸ್ ಮಾಸೆತ್ತಿ ವಿಶ್ವನಾಥರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ರಿಯೊ ಡಿ ಜನೈರೋದ ಬಳಿ ‘ವಿಶ್ವ ವಿದ್ಯಾ’ ಪಾಠಶಾಲೆ ತೆರೆದಿರುವ ವಿಶ್ವನಾಥ, ವೇದಾಂತದ ಅಧ್ಯಯನಕ್ಕೂ ವಿದೇಶಿಯರನ್ನು ಸೆಳೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು

ಸಾಧಕರ ಸ್ಮರಣೆ

ಸಿಖ್ ಧರ್ಮ ಸಂಸ್ಥಾಪಕ ಗುರು ನಾನಾಕ್ (ನ. 30 ಜನ್ಮದಿನ), ತತ್ವಜ್ಞಾನಿ ಶ್ರೀ ಅರಬಿಂದೊ ಘೋಷ್ (ಡಿ. 5 ಪುಣ್ಯಸ್ಮರಣೆ), ಡಾ.ಬಿ.ಆರ್.ಅಂಬೇಡ್ಕರ್ (ಡಿ. 6 ಪುಣ್ಯಸ್ಮರಣೆ) ಮತ್ತು ಪಕ್ಷಿ ತಜ್ಞ ಡಾ. ಸಲೀಂ ಅಲಿ, ನ್ಯೂಜಿಲೆಂಡ್ ಸಂಸತ್​ಗೆ ಆಯ್ಕೆಯಾಗಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಗೌರವ್ ಶರ್ವರನ್ನು ಪ್ರಧಾನಿ ಮೋದಿ ಸ್ಮರಿಸಿದರು. ಆತ್ಮನಿರ್ಭರ ಭಾರತಕ್ಕೆ ಅರಬಿಂದೊರ ಸ್ವದೇಶಿ ಮಂತ್ರವೇ ಸ್ಪೂರ್ತಿ ಎಂದರು.