ಕರ್ನಾಟಕ ಸಂಘದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಎನ್.ಡಿ.ಸುಂದರೇಶ್ ಪುಣ್ಯಸ್ಮರಣೆ ನೆರವೇರಿತು. ಕೆ.ಟಿ.ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ, ವಾಣಿ ಪಟ್ನಾಯಕ್, ಸುಧಾಂಶು, ಮಂಡ್ಯದ ನಾಗಣ್ಣ, ಗ್ಯಾರಂಟಿ ರಾಮಣ್ಣ, ಕೆ.ಎಸ್.ಪುಟ್ಟಪ್ಪ, ಕೋಲಾರ್ ಮಂಜುನಾಥ, ವೀರಪ್ಪ, ಹಾಲೇಶಪ್ಪ ಇದ್ದರು. 
ನ್ಯೂಸ್

ರೈತ ಸಂಘ ಸ್ವಾರ್ಥಕ್ಕೆ ಬಳಕೆ: ಚುಕ್ಕಿ ನಂಜುಂಡಸ್ವಾಮಿ ಕಳವಳ

ಶಿವಮೊಗ್ಗ: ರೈತರು ಧರಿಸುವ ಹಸಿರು ಶಾಲು ಶೋಕಿಗೆ ಹಾಕುವುದಲ್ಲ. ಕೆಲವರು ರೈತ ಸಂಘದ ಟವೆಲ್ ಅನ್ನು ವಸೂಲಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಇವತ್ತಿನ ತಲೆಮಾರಿನ ಒಂದು ವರ್ಗ ರೈತ ಸಂಘವನ್ನು ಸ್ವಾರ್ಥಕ್ಕೆ ಬಳಕೆ ಮಾಡುತ್ತಿದೆ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಸಾಮೂಹಿಕ ನಾಯಕತ್ವ)ಯಿಂದ ಆಯೋಜಿಸಿದ್ದ 32ನೇ ವರ್ಷದ ಎನ್.ಡಿ.ಸುಂದರೇಶ್ ಪುಣ್ಯಸ್ಮರಣೆ ಮತ್ತು ರೈತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ಸಮಸ್ಯೆಗಳು ರೈತರನ್ನು ಕಾಡುತ್ತಿದೆ. ಹಿಂದೆ ಲಾರಿ ಬಸ್‌ಗಳಲ್ಲಿ ರೈತರು ಹೋರಾಟಕ್ಕೆ ಬರುತ್ತಿದ್ದರು. ಆದರೆ ಈಗ ಆ ಸ್ಥಿತಿ ಇಲ್ಲ ಎಂದರು.

ರೈತ ಸಂಘಟನೆಗಳು ಒಂದಾಗಬೇಕು. ವಿಚಾರದ ಮೇಲೆ ರೈತರು ಒಂದಾಗುವುದಕ್ಕೆ ಕೇವಲ ಒಂದೇ ನಿಮಿಷ ಸಾಕು. ಆದರೆ ನಾನೇ ಅಧ್ಯಕ್ಷನಾಗಬೇಕು, ಅದಾಗಬೇಕು, ಇದಾಗಬೇಕೆಂಬ ಅಹಂ ಅದಕ್ಕೆ ಆಸ್ಪದ ನೀಡುತ್ತಿಲ್ಲ. ಯಾವುದೇ ಅಧಿಕಾರ ಬಯಸದೇ ರೈತರಿಗೆ ದುಡಿಯುವ ತಂಡವನ್ನು ಕಟ್ಟಬೇಕು. ರೈತ ಹೋರಾಟವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ತುರ್ತಾಗಿ ಆಗಬೇಕು ಎಂದು ಹೇಳಿದರು.

ಸುಂದರೇಶ್ ಪುತ್ರ ಎನ್.ಎಸ್.ಸುಧಾಂಶು ಮಾತನಾಡಿದರು. ರೈತ ಮುಖಂಡ ಕೆ.ಟಿ.ಗಂಗಾಧರ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ರಾಮಣ್ಣ ಕೆಂಚಾಲೆ, ಓಡಿಸ್ಸಾದ ವಾಣಿ ಪಟ್ನಾಯಕ್, ಸುಧಾಂಶು, ಮಂಡ್ಯದ ನಾಗಣ್ಣ, ಗ್ಯಾರಂಟಿ ರಾಮಣ್ಣ, ಕೆ.ಎಸ್.ಪುಟ್ಟಪ್ಪ, ಕೋಲಾರ್ ಮಂಜುನಾಥ, ಸಂಘದ ಗೌರವಾಧ್ಯಕ್ಷ ವೀರಪ್ಪ, ಜಿಲ್ಲಾಧ್ಯಕ್ಷ ಹಾಲೇಶಪ್ಪ, ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ ಉಪಸ್ಥಿತರಿದ್ದರು.