ತೀರ್ಥಹಳ್ಳಿ: ಗೋವು ಆಧಾರಿತ ಕೃಷಿಯಿಂದ ರೈತರು ವಿಮುಖರಾಗುತ್ತಿರುವುದು ಗೋಸಂತತಿ ಅವನತಿ ಕಡೆಗೆ ಸಾಗುವುದಕ್ಕೆ ಕಾರಣವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆ ನಿರ್ದೇಶನದಂತೆ ಜಾನುವಾರು ಗಣತಿ ಕಾರ್ಯಕ್ಕೆ ಗುಡ್ಡೇಕೊಪ್ಪದಲ್ಲಿ ಚಾಲನೆ ನೀಡಿ ಮಾತನಾಡಿ, ಗೋವುಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಆತಂಕದ ಸಂಗತಿ. ಗೋವುಗಳ ಸಾಕಾಣೆಗೆ ಸರ್ಕಾರಗಳು ಉತ್ತೇಜನ ನೀಡಬೇಕು. ಭಾರತದ ಕೃಷಿ ಗೋವು ಆಧಾರಿತವಾಗಿದೆ. ಜಾನುವಾರುಗಳ ಸಗಣಿಯಿಂದ ಮಣ್ಣಿನ ಲವತ್ತತೆ ಹೆಚ್ಚುತ್ತದೆ. ಆದರೆ ನಮ್ಮ ರೈತರು ಗೋವು ಆಧಾರಿತ ಕೃಷಿಯಿಂದ ದೂರವಾಗುತ್ತಿದ್ದಾರೆ ಎಂದರು.
ಗುಡ್ಡೇಕೊಪ್ಪ ಗ್ರಾಪಂ ಅಧ್ಯಕ್ಷ ಅಗಸಾಡಿ ಶ್ಯಾಮಪ್ಪ, ಸದಸ್ಯ ಗುರುಮೂರ್ತಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಬಾಬುರತ್ನ, ಸಹಾಯಕ ನಿರ್ದೇಶಕ ಡಾ. ನಾಗರಾಜ್, ಪಶು ವೈದ್ಯಾಧಿಕಾರಿ ಡಾ. ಮುರಳೀಧರ ಕಿರಣಕೆರೆ, ಡಾ. ಶ್ರೀಧರ್, ಡಾ. ಬೃಂದಾ ಇತರರಿದ್ದರು.