ನ್ಯೂಸ್

VIDEO| ಮೋದಿ ಮೇಲಿನ ಅಭಿಮಾನದಿಂದ ರೈತ ಮಾಡಿದ್ದೇನು?..ವಿಡಿಯೋ ನೋಡಿ

ನವದೆಹಲಿ: ಬಸ್ಸಿನಲ್ಲಿ ಮೋದಿಯವರ ಫೋಟೋ ನೋಡಿದ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇರುವ ಪ್ರೀತಿ ಹಾಗೂ ಗೌರವವನ್ನು ವ್ಯಕ್ತಪಡಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವೀಡಿಯೋದಲ್ಲಿ ಏನಿದೆ?: ನಿಂತಿದ್ದ ಬಸ್ಸಿನಲ್ಲಿ ಮೋದಿಯವರ ಫೋಟೋ ನೋಡಿದ ರೈತ ಹತ್ತಿರ ಹೋಗಿ ಪ್ರೀತಿಯಿಂದ ಹತ್ತಿರಕ್ಕೆ ಹೋಗಿದ್ದಾನೆ. ಮೊದಲು 1000 ರೂಪಾಯಿ ಪಿಂಚಣಿ ಸಿಗುತ್ತಿತ್ತು, ಈಗ ಹೆಚ್ಚುವರಿಯಾಗಿ 500 ಸಿಗುತ್ತಿದೆ. ನಿಮ್ಮ ಸರ್ಕಾರ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡುತ್ತಿದೆ. ಬಡವರ ಮನೆ ಸದಾ ಹಸಿರಾಗಿರುವುದು ನಿಮ್ಮ ಆಶಯವಾಗಿದೆ. ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನೀವು ಮಾಡುವ ಉತ್ತಮ ಕೆಲಸಗಳಿಂದ ನೀವು ಬಡವರ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದೀರಾ ಎಂದು ಹೇಳುತ್ತಾ ರೈತ ಭಾವುಕನಾಗಿದ್ದಾನೆ.

ಈ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಮೆಚ್ಚುಗೆ ಸೂಚಿಸಿ ಕಾಮೆಂಟ್​ ಮಾಡುತ್ತಿದ್ದಾರೆ.