ಮೃತ ರೈತ ಮಂಜುನಾಥ್  
ನ್ಯೂಸ್

ವಿಷ ಕುಡಿದು ರೈತ ಆತ್ಮಹತ್ಯೆ

ಅಭಿನಯ್ ಎಚ್.ಎಂ

ಬೆಟ್ಟದಪುರ: ಸಾಲಬಾಧೆಯಿಂದ ಜಿಗುಪ್ಸೆಗೊಂಡು ಬೆಟ್ಟದಪುರ ಸಮೀಪದ ಅಲ್ಪನಾಯಕನಹಳ್ಳಿ ಗ್ರಾಮದಲ್ಲಿ ರೈತನೊಬ್ಬ ಶುಕ್ರವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್ (44) ಮೃತ ರೈತ.

ಮಂಜುನಾಥ್‌ಗೆ ಅಲ್ಪನಾಯಕನಹಳ್ಳಿ ಹಾಗೂ ಗೊರಹಳ್ಳಿದಲ್ಲಿ ಒಟ್ಟು ಐದು ಎಕರೆ ಜಮೀನಿದ್ದು, ತಂಬಾಕು ಬೆಳೆ ಬೆಸಾಯ ಮಾಡಿದ್ದರು. ಕೃಷಿಗಾಗಿ ಸೀಗೂರು ಗ್ರಾಮದ ಎಸ್‌ಬಿಐ ಬ್ಯಾಂಕ್‌ನಲ್ಲಿ 12 ಲಕ್ಷ ರೂ. ಹಾಗೂ 6 ಲಕ್ಷ ರೂ. ಕೈಸಾಲ ಮಾಡಿದರು. ಅನಾವೃಷ್ಟಿಯಿಂದ ಸಕಾಲಕ್ಕೆ ಮಳೆಯಾಗದೆ ಬೆಳೆ ಸರಿಯಾದ ಪ್ರಮಾಣದಲ್ಲಿ ಬಾರದ ಕಾರಣ ತನ್ನ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವರಿಗೆ ಪತ್ನಿ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಬೆಟ್ಟದಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.