ಮುಂಬೈ: ಭಾರತೀಯ ಚಲನಚಿತ್ರ ನಿರ್ದೇಶಕಿ, ಬರಹಗಾರ, ಚಲನಚಿತ್ರ ನಿರ್ಮಾಪಕ, ನಟಿ, ನರ್ತಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ಅವರು ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಮೊದಲ ಬಾರಿಗೆ ಆಡಿಷನ್ಗೆ ಹೇಗೆ ಬಂದಿದ್ದರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.
ರಾಖಿ ಸಾವಂತ್ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ರಾಖಿ ಫಸ್ಟ್ ಟೈಂ ಕ್ಯಾಮೆರಾ ಎದುರಿಸಿದ ಸಮಯದ ಆಸಕ್ತಿಕರ ಸಂಗತಿಯೊಂದನ್ನು ಚಿತ್ರದ ಸಹ ನಿರ್ದೇಶಕಿ ಫರಾ ಖಾನ್ ಮಾತನಾಡಿ, ಮೈ ಹೂಂ ನಾ ರಾಖಿಗೆ ಚೊಚ್ಚಲ ಚಿತ್ರ.ಮೊದಲು ಬೇರೆ ನಟಿ ಈ ಸಿನಿಮಾಕ್ಕೆ ಆಯ್ಕೆಯಾಗಿದ್ದರು. ಆದರೆ ನಟಿ ತಾಯಿ ಚಿತ್ರತಂಡಕ್ಕೆ ಕಂಡಿಶನ್ ಮೇಲೆ ಕಂಡಿಶನ್ ಹಾಕುತ್ತಾ ಹೋದರು. ಹೀಗಾಗಿ ಹೀರೋಯಿನ್ ಬದಲಿಸಬೇಕಾಯ್ತು. ಆಗ ಈ ಪಾತ್ರಕ್ಕಾಗಿ ಬೇರೆ ಯಾವ ನಟಿಯನ್ನು ಆಡಿಷನ್ ಮಾಡಲಾಗಿದೆ ಎಂದಾಗ ನೆನಪಾಗಿದ್ದು ಆಗ ಬುರ್ಖಾ ಧರಿಸಿ ಬಂದಿದ್ದ ರಾಖಿ. ಡಾರ್ಜಿಲಿಂಗ್‌ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾದ ಎರಡು ದಿನಗಳ ನಂತರ ರಾಖಿ ಸಾವಂತ್ ಮೈ ಹೂಂ ನಾ ಶೂಟಿಂಗ್‌ಗೆ ಸೇರಿಕೊಂಡರು.
ಆಡಿಶನ್‌ಗೆ ಬಂದಾಗ ರಾಶಿ ಸಾವಂತ್ ಬುರ್ಖಾ ಧರಿಸಿದ್ದರಂತೆ. ಬುರ್ಕಾವನ್ನು ತೆಗೆದಳು ಮತ್ತು ಒಳಗೆ ಬಿಕಿನಿಯಲ್ಲಿದ್ದ ಆಕೆಯನ್ನು ನೋಡುತ್ತಲೇ ಇಡೀ ಕ್ಯಾಮೆರಾ ನಡುಗುತ್ತಿತ್ತು. ಅವಳಿಗೆ ಕಿತ್ತಳೆ ಬಣ್ಣದ ಕೂದಲು ಇದ್ದುದರಿಂದ ನಾವು ಅವಳನ್ನು ತಕ್ಷಣ ಆಯ್ಕೆ ಮಾಡಲಿಲ್ಲ. ನಂತರ ಈಕೆಯನ್ನು ಸಿನಿಮಾಗೆ ಆಯ್ಕೆ ಮಾಡಬೇಕಾಯ್ತು.
ರಾಖಿ ಸಿನಿಮಾ ಚಿತ್ರೀಕರಣಕ್ಕೆ ಡಾರ್ಜಿಲಿಂಗ್‌ಗೆ ಬಂದಾಗ ಅವಳನ್ನು ಪೂರ್ತಿ ಮುಚ್ಚಿಡುವುದು ಹೇಗೆ ಎಂಬುದೇ ದೊಡ್ಡ ತಲೆನೋವಾಗಿತ್ತು. ನಾವು ಚಳಿ ಇದೆ ಸ್ವೆಟರ್ ಹಾಕ್ಕೋ ಎಂದರೆ ಆಕೆಗೆ ಮೈ ತೋರಿಸಬೇಕಿತ್ತು. ರಾಖಿ ಅವರೊಂದಿಗೆ ಕೆಲಸ ಮಾಡಲು ಸಂತೋಷವಾಗಿದೆ ಎಂದು ಹೇಳಿದ್ದಾರೆ.