ಹೈದರಾಬಾದ್: ಟಾಲಿವುಡ್ ಸೂಪರ್ಸ್ಟಾರ್ ಜೂನಿಯರ್ NTR ಇದೀಗ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಹೌದು, RRR ಮತ್ತು ದೇವರ ಸಿನಿಮಾದ ಬಳಿಕ ಅಭಿಮಾನಿಗಳ ಜತೆ ಕಾಣಿಸಿಕೊಂಡಿಲ್ಲ. ದೇವರ ಸಿನಿಮಾ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಭರ್ಜರಿ ಹಿಟ್ ಕೊಟ್ಟಿತ್ತು. ಇದರ ಸಕ್ಸಸ್ ಮೀಟ್ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇತ್ತು. ಆದರೆ, ಕೆಲ ಕಾರಣಗಳಿಂದ ಸಕ್ಸಸ್ ಮೀಟ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ, ಅಲ್ಲಿಂದ ಫ್ಯಾನ್ಸ್ಗೆ ನಟ ಜೂನಿಯರ್ ಎನ್ಟಿಆರ್ ಸಿಕ್ಕೆ ಇಲ್ಲ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿವೊಂದು ಮಾಡಿದ್ದಾರೆ.
ತಮ್ಮನ್ನು ಭೇಟಿಯಾಗಲು ಕಾಯುತ್ತಿದ್ದ ಅಭಿಮಾನಿಗಳ ಆಸಕ್ತಿಯನ್ನು ಅರ್ಥಮಾಡಿಕೊಂಡ ಅವರು, ಶೀಘ್ರದಲ್ಲೇ ಸುಗಮವಾಗಿ ಆಯೋಜಿಸಲಾದ ಸಭೆಯಲ್ಲಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಹಂಚಿಕೊಂಡಿರುವ NTR, ಅಭಿಮಾನಿಗಳ ತೋರಿದ ಅಪಾರ ಪ್ರೀತಿ ಮತ್ತು ಗೌರವಕ್ಕಾಗಿ ಪ್ರಾಮಾಣಿಕವಾಗಿ ಧನ್ಯವಾದಗಳು. ತಮ್ಮನ್ನು ಭೇಟಿಯಾಗಲು ಕಾಯುತ್ತಿದ್ದ ಅಭಿಮಾನಿಗಳ ಆಸಕ್ತಿಯನ್ನು ಅರ್ಥಮಾಡಿಕೊಂಡ ಅವರು, ಶೀಘ್ರದಲ್ಲೇ ಸುಗಮವಾಗಿ ಆಯೋಜಿಸಲಾದ ಸಭೆಯಲ್ಲಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ.
ಯಾವುದೇ ಶಾಂತಿ ಮತ್ತು ಭದ್ರತೆಗೆ ತೊಂದರೆಯಾಗದಂತೆ ಎಲ್ಲಾ ಅನುಮತಿಗಳನ್ನು ಪಡೆದು ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಕಾರ್ಯಕ್ರಮವನ್ನು ನೋಡಿಕೊಳ್ಳಲಾಗುತ್ತಿದೆ. ಇಷ್ಟು ದೊಡ್ಡ ಸಭೆಯನ್ನು ಆಯೋಜಿಸಲು ಸ್ವಲ್ಪ ಸಮಯ ಬೇಕಾಗುವುದರಿಂದ ಅಭಿಮಾನಿಗಳು ತಾಳ್ಮೆಯಿಂದ ಇರಬೇಕೆಂದು ಕೇಳಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ನನ್ನನ್ನು ಭೇಟಿ ಮಾಡಲು ಪಾದಯಾತ್ರೆಗೆ ತೆರಳದಂತೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದಾರೆ. ಅಭಿಮಾನಿಗಳ ಸಂತೋಷ ಮಾತ್ರವಲ್ಲ, ಅವರ ಕಲ್ಯಾಣವೂ ತನಗೆ ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ. (ಏಜೆನ್ಸೀಸ್)