ತೆಲುಗಿನ ಜನಪ್ರಿಯ ಮಾಡೆಲ್ ಜ್ಞಾನೇಶ್ವರಿ ಕಂಡ್ರೆಗುಲಾ ಅವರು ಇತ್ತೀಚೆಗೆ ಚರಣ್ ನನಗೆ ಮೋಡಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆರ್‌ಆರ್‌ಆರ್ ಚಿತ್ರದಿಂದ ದೊಡ್ಡ ಇಮೇಜ್ ಗಳಿಸಿದ ಚರಣ್ ಸಿನಿಮಾದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ರು.
ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಜ್ಞಾನೇಶ್ವರಿ ನಂತರ ನಟಿಯಾದರು. ಅದಾದ ನಂತರ ಹಲವು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಕೆಲವು ಸಣ್ಣ ಸಿನಿಮಾಗಳಲ್ಲಿ ನಾಯಕಿಯಾಗಿಯೂ ಮಿಂಚಿದ್ದು, ಇವರನ್ನ ಮೆಚ್ಚಿಕೊಂಡ ಅಭಿಮಾನಿಗಳು ಸಾಕಷ್ಟು ಮಂದಿ.
ತೆಲುಗಿನ ಬೆಡಗಿ ಇತ್ತೀಚೆಗಷ್ಟೇ ಲವು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಕೆಲವು ಸಣ್ಣ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಂತ್ ಆಫ್ ಮಧು ಚಿತ್ರದಲ್ಲಿ ಒಳ್ಳೆಯ ಪಾತ್ರ ಮಾಡಿದ್ದಾಳೆ. ಅಲ್ಲದೇ ಸದ್ಯ ನಾಗ ಚೈತನ್ಯ ಅವರ ದೂತ ವೆಬ್ ಸಿರೀಸ್‌ನಲ್ಲಿ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಅಭಿಮಾನಿಗಳನ್ನ ರಂಜಿಸಿದ್ದಾರೆ.
ಜ್ಞಾನೇಶ್ವರಿ ಅವರು ನೀಡಿದ ಯೂಟ್ಯೂಬ್ ಚಾನೆಲ್ ಸಂದರ್ಶನವೊಂದು ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ತೆಲುಗು ಸುಂದರಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಬೆಡಗಿ ತಮಗೆ ರಾಮ್ಚರಣ್ ಅಂದ್ರೆ ತುಂಬಾ ಇಷ್ಟ ಅನ್ನೋದನ್ನ ಈ ಶೋ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ರಾಮ್ ಚರಣ್ ತನಗೆ ಎಷ್ಟು ಇಷ್ಟ ಎಂದು ಈ ಸುಂದರಿ ಬಹಿರಂಗಪಡಿಸಿದ್ದಾರೆ.
ಸದ್ಯ ತೆಲುಗಿನ ಮಾಡೆಲ್ ನೀಡಿದ ಹೇಳಿಕೆ ದೊಡ್ಡ ಮಟ್ಟಿನಲ್ಲಿ ವೈರಲ್ ಆಗುತ್ತಿದ್ದು, ರಾಮ್ಚರಣ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ರೆ ರಾಮ್ಚರಣ್ ಫ್ಯಾನ್ಸ್ ಮಾತ್ರ ಈ ಬಗ್ಗೆ ಸಾಕಷ್ಟು ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ.