Misha Agarwal: ಚಿಕ್ಕ ವಯಸ್ಸಿನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಹೆಚ್ಚಿನ ಜನಪ್ರಿಯತೆಯ ಜೊತೆಗೆ ಅಧಿಕ ಫಾಲೋವರ್ಸ್ ಹೊಂದಿದ್ದ ಮಿಶಾ ಅಗರ್ವಾಲ್ ನಿಧನರಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಹಾಗೂ ರೀಲ್ಸ್ ಮೂಲಕ ಜನಮನ್ನಣೆ ಗಳಿಸಿದ ಮಿಶಾ ಅಗರ್ವಾಲ್ ತನ್ನ 25ನೇ ವರ್ಷದ ಹುಟ್ಟುಹಬ್ಬಕ್ಕೆ ಕೇವಲ ಎರಡು ದಿನ ಇರುವಾಗ ಹಠಾತ್ ನಿಧನರಾಗಿದ್ದಾರೆ.
ಮಿಶಾ ಅಗರ್ವಾಲ್ ಸಾವಿನ ಸುದ್ದಿಯನ್ನು ಅವರ ಕುಟುಂಬವು ಶುಕ್ರವಾರ (ಏ.25)ದಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಿಶಾ ಅಗರ್ವಾಲ್ ಅವರ ನಿಧನದ ಸುದ್ದಿಯನ್ನು ನಾವು ದು:ಖದಿಂದ ಹಂಚಿಕೊಳ್ಳುತ್ತಿದ್ದೇವೆ. ನೀವು ಅವರಿಗೆ ಮತ್ತು ಅವರ ಕೆಲಸಕ್ಕೆ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಈ ಅಪಾರ ನಷ್ಟವನ್ನು ನಾವು ಇನ್ನೂ ನಿಭಾಯಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಿಶಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರ ಕುಟುಂಬದವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಕೇಂದ್ರದ ಉದ್ಯೋಗಾವಕಾಶ ಮಾಹಿತಿ
ಇನ್ಸ್ಟಾಗ್ರಾಮ್ನಲ್ಲಿ ಈ ಸುದ್ದಿ ಪೋಸ್ಟ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಇತರ ಸಹ ಕಂಟೆಂಟ್ ಕ್ರಿಯೇಟರ್ಸ್ ಶಾಕ್ ಆಗಿದ್ದಾರೆ. ಅವರ ಸಾವಿನ ಸುದ್ದಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಮತ್ತು ಶ್ರದ್ಧಾಂಜಲಿ ಸಂದೇಶಗಳು ತುಂಬಿ ತುಳುಕುತ್ತಿವೆ.
"ಇದು ಹೃದಯವಿದ್ರಾವಕ. ಮಿಶಾ ತುಂಬಾ ಪ್ರತಿಭಾನ್ವಿತ ಮತ್ತು ಶ್ರಮಶೀಲಳಾಗಿದ್ದಳು. ಕುಟುಂಬವು ಏನನ್ನು ಎದುರಿಸುತ್ತಿರಬಹುದು ಎಂದು ನಾನು ಊಹಿಸಲು ಸಹ ಸಾಧ್ಯವಿಲ್ಲ. ಪ್ರೀತಿ ಮತ್ತು ಶಕ್ತಿಯನ್ನು ಕಳುಹಿಸುತ್ತಿದೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
"ಇದರಿಂದ ತುಂಬಾ ದುಃಖವಾಯಿತು. ನೀನು ಪ್ರೀತಿಸಲ್ಪಟ್ಟಿದ್ದೀಯಾ ಎಂದು ನಿನಗೆ ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು ಮಿಶಾ! ನಿನ್ನ ಪ್ರಾಣ ತೆಗೆಯುವುದನ್ನು ತಡೆಯಲು ನಮ್ಮ ಪ್ರೀತಿ ಸಾಕಾಗಿತ್ತು. ನಿನ್ನ ಪ್ರೀತಿಗೆ ನನ್ನ ಹೃದಯ ತುಂಬಲಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಏನು…! ನನ್ನ ದೇವರೇ ನಾನಗೆ ಈಗಷ್ಟೇ ಎಚ್ಚರವಾಯಿತು, ಇನ್‌ಸ್ಟಾಗ್ರಾಮ್ ತೆರೆದೆ ಇದು ನಾನು ಮೊದಲು ನೋಡುತ್ತಿರುವುದು, ಇದು ನಂಬಲಸಾಧ್ಯನನ್ನ ತಲೆಯಲ್ಲಿ ಅವಳ ಧ್ವನಿ ಕೇಳುತ್ತಿದೆ, ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇನ್ನೊಬ್ಬ ನೆಟ್ಟಿಗ ಬರೆದಿದ್ದಾರೆ. (ಏಜೆನ್ಸೀಸ್)