ನ್ಯೂಸ್

Darshan ನನ್ನ ಕಾಲನ್ನು ಹಿಡಿದು ತಮ್ಮ ಎದೆಗೆ ಒದ್ದಿಸಿಕೊಂಡಿದ್ದರು; ದಾಸನ ಕುರಿತು ಖ್ಯಾತ ನಟನ ಹೇಳಿಕೆ ವೈರಲ್​

ಬೆಂಗಳೂರು: ಗೆಳತಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸ್ಸೇಜ್​ ಮಾಡಿದ್ದ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು (Renukaswamy Murder) ಹತ್ಯೆ ಮಾಡಿ ಜೈಲು ಸೇರಿದ್ದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ (Darshan) ಸದ್ಯ ಬೆನ್ನು ನೋವಿನ ಕಾರಣ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೂ ದರ್ಶನ್​ (Darshan) ಅವರು ನಟಿಸಿ, ನಿರ್ಮಿಸಿದ್ದ ನವಗ್ರಹ ಚಿತ್ರವು ನವೆಂಬರ್​ 08ರಂದು ಮರುಬಿಡುಗಡೆಯಾಗುತ್ತಿದ್ದು (ReRelease), ಈ ಸಿನಿಮಾದ ಬಗ್ಗೆ ಚಿತ್ರತಂಡ ಹಲವು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದೆ.

2008ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ದರ್ಶನ್​ (Darshan) ಅವರ ಸಹೋದರ ದಿನಕರ್​ ತೂಗುದೀಪ (Dinakar Thoogudeepa) ಆ್ಯಕ್ಷನ್​, ಕಟ್​ ಹೇಳಿದ್ದರು. ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ ಖಳಪಾತ್ರಧಾರಿಗಳ ಮಕ್ಕಳು ನಾಯಕರಾಗಿ ನಟಿಸಿದ್ದರು. ವಿನೋದ್​ ಪ್ರಭಾಕರ್​, ಸೃಜನ್​ ಲೋಕೇಶ್​, ನಾಗೇಂದ್ರ ಅರಸ್​, ಗಿರಿ ದಿನೇಶ್​, ಧರ್ಮ ಕೀರ್ತಿರಾಜ್​, ತರುಣ್​ ಸುಧೀರ್​ ಸೇರಿದಂತೆ ಪ್ರಮುಖರು ಈ ಚಿತ್ರದಲ್ಲಿ ನಟಿಸಿದ್ದರು. ಇನ್ನೂ ಈ ಚಿತ್ರದಲ್ಲಿ ವಿನೋದ್​ ಪ್ರಭಾಕರ್​ (Vinnod Prabhakar) ದರ್ಶನ್​ (Darshan) ಅವರ ಸ್ನೇಹಿತನ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ನವೆಂಬರ್​ 08ರಂದು ಸಿನಿಮಾ ಮರುಬಿಡುಗಡೆಯಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದೆ. ಈ ವೇಳೆ ಚಿತ್ರತಂಡ ಹಲವು ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದು, ತಮ್ಮ​ ಹಾಗೂ ದರ್ಶನ್ (Darshan)​ ನಡುವಿನ ಫೈಟ್​ ಸೀಕ್ವೆನ್ಸ್​ ವೇಳೆ ನಡೆದ ಘಟನೆಯೊಂದನ್ನು ವಿನೋದ್​ ಪ್ರಭಾಕರ್​ (Vinnod Prabhakar) ಹಂಚಿಕೊಂಡಿದ್ದು, ದರ್ಶನ್​ ಹಾಗೂ ತಮ್ಮ ನಡುವಿನ ಸ್ನೇಹವನ್ನು ನೆನೆದಿದ್ದಾರೆ.

ಈ ಸಿನಿಮಾದಲ್ಲಿ ದರ್ಶನ್‌ (Darshan) ಹಾಗೂ ವಿನೋದ್‌ (Vinnod Prabhakar) ಅವರ ನಡುವೆ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಫೈಟ್‌ ಸೀಕ್ವೆನ್ಸ್​ ಇದೆ. ದರ್ಶನ್‌ (Darshan) ಜೊತೆಗಿನ ಫೈಟ್‌ ಸೀನ್‌ ಶೂಟಿಂಗ್‌ ಮಾಡುವಾಗ ವಿನೋದ್‌ (Vinnod Prabhakar) ಅವರು ದರ್ಶನ್‌ (Darshan) ಅವರ ಎದೆಗೆ ಕಾಲಿನಿಂದ ಒದೆಯುವ ಸೀನ್‌ ಇತ್ತಂತೆ. ಇದಕ್ಕೆ ವಿನೋದ್​ ಪ್ರಭಾಕರ್​ (Vinnod Prabhakar) ಅವರು ಒಪ್ಪಿರಲಿಲ್ಲವಂತೆ. ಇದಕ್ಕೆ ನಾನು ಒಪ್ಪಿರಲಿಲ್ಲ. ದರ್ಶನ್‌ (Darshan) ಅವರಿಗೆ ಕಾಲಿನಿಂದ ಒದೆಯುವ ಸೀನ್‌ ನನಗೂ ಇಷ್ಟವಿರಲಿಲ್ಲ.

ಈ ವಿಚಾರವನ್ನು ತಿಳಿದು ದರ್ಶನ್‌ (Darshan) ಅವರೇ ಖುದ್ದಾಗಿ ತನ್ನ ಎದೆಗೆ ಕಾಲಿನಿಂದ ಒದೆಯುವಂತೆ ಕೇಳಿಕೊಂಡಿದ್ದರು. ಅದಕ್ಕೂ ನಾನು ಒಪ್ಪಲಿಲ್ಲ. ಕೊನೆಗೆ ಅವರೇ ನನ್ನ ಕಾಲನ್ನು ಹಿಡಿದು ತಮ್ಮ ಎದೆಗೆ ಒದ್ದಿಸಿಕೊಂಡರು. ಇದೆಲ್ಲಾ ಬೇಡ ಎಂದು ಎಷ್ಟು ಕೇಳಿದ್ರೂ ದರ್ಶನ್‌ ಒಪ್ಪಲೇ ಇಲ್ಲ. ನೀವು ಸುಮ್ಮನೆ ಕಾಲನ್ನು ಫ್ರೀಬಿಡಿ ಎಂದು ಹೇಳಿದರು. ಕೊನೆಗೆ ಅವರೇ ನನ್ನ ಕಾಲನ್ನು ಎಳೆದುಕೊಂಡು ಅವರ ಎದೆಗೆ ಒದ್ದಿಸಿಕೊಂಡ್ರು. ನನ್ನ ಪ್ರಕಾರ ಅವರ ಮಟ್ಟಕ್ಕೆ ಬೆಳೆದಿದ್ದ ಯಾರೂ ಕೂಡ ಅಂತಹ ದೃಶ್ಯವನ್ನು ಒಪ್ಪುತ್ತಿರಲಿಲ್ಲ ಎಂದು ಶೂಟಿಂಗ್​ ವೇಳೆ ನಡೆದ ಘಟನೆಯನ್ನು ವಿನೋದ್​ ಪ್ರಭಾಕರ್​ (Vinnod Prabhakar)ನೆನೆದಿದ್ದಾರೆ.

ಬೆನ್ನು ನೋವಿನ ಕಾರಣ ನಟ ದರ್ಶನ್ (Darshan)​ ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಕೆಂಗೇರಿ ಬಳಿ ಇರುವ ಬಿಜಿಎಸ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ಅವರನ್ನು ವಿಐಪಿ ಸೂಟ್​ನಲ್ಲಿ (VIP Suit) ಇರಿಸಿ ಚಿಕಿತ್ಸೆ ಕೊಡುತ್ತಿದ್ದಾರೆ. ಕುಟುಂಬಸ್ಥರು ಸೇರಿದಂತೆ ದರ್ಶನ್​ ಭೇಟಿಗೆ ಏಳು ಮಂದಿಗೆ ಮಾತ್ರ ಅವಕಾಶವಿದ್ದು, ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ.