ನ್ಯೂಸ್

ಮನೆ ಬಿಟ್ಟು ಹೋಗಿ ಮದ್ವೆಯಾದ ಮಗಳ ಶ್ರಾದ್ಧ ಮಾಡಿ, ಪಿಂಡ ಇಟ್ಟ ಪೋಷಕರು! Family holds funeral for daughter

ಕೋಲ್ಕತ್ತಾ:  (Family holds funeral for daughter ) ಮಗಳು ಓಡಿ ಹೋಗಿ ಮದುವೆಯಾಗಿದ್ದನ್ನು ಸಹಿಸಲಾಗದೆ ದಂಪತಿ  ತಮ್ಮ ಜೀವಂತ ಮಗಳ ಶ್ರಾದ್ಧ ನೆರವೇರಿಸಿ ಪಿಂಡ ಇಟ್ಟಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದ ಚೋಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಾಪುರ ಗ್ರಾಮ ಪಂಚಾಯತ್‌ನ ಜುವಾಖುರಿ ಅಗ್ನಿಬರಿ ಪ್ರದೇಶದಲ್ಲಿ ನಡೆದಿದೆ.

ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಮನೆಗೆ ಬರಲು ಒಪ್ಪಲಿಲ್ಲ. ಬಳಿಕ ಆಕೆ ಜೀವಂತವಿದ್ದರೂ ಕೂಡ ಶ್ರಾದ್ಧ ಮಾಡಲು ಮುಂದಾದರು. ಗ್ರಾಮದ ಅನೇಕ ಜನರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಗಳ ಅಂತ್ಯಕ್ರಿಯೆಯ ಸಮಯದಲ್ಲಿ, ಪೋಷಕರು ಸೇರಿದಂತೆ ಇಡೀ ಕುಟುಂಬವೇ ಕಣ್ಣೀರು ಹಾಕಿದೆ.

ಅಂತ್ಯಕ್ರಿಯೆ ನೆರವೇರಿಸಿ, ತಮ್ಮ ಮಗಳು ಇನ್ನು ತಮ್ಮ ಪಾಲಿಗಿಲ್ಲ ಎನ್ನುವ ದೃಢ ನಿಶ್ಚಯ ಮಾಡಿದ್ದಾರೆ. ಭವಿಷ್ಯದಲ್ಲಿ ಊರಿನ ಯಾವುದೇ ಹೆಣ್ಣುಮಗಳು ಈ ರೀತಿಯ ಕೆಲವ ಮಾಡದಿರಲಿ ಎನ್ನುವ ಎಚ್ಚರಿಕೆಯಲ್ಲಿ ಈ ರೀತಿ ಮಾಡಿದ್ದಾರೆ.

‘ಶ್ರಾದ್ಧ’ ಹಿಂದೂ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ, ಮೃತ ಪೂರ್ವಜರನ್ನು ಗೌರವಿಸಲು ಮತ್ತು ಅವರ ಆತ್ಮಗಳನ್ನು ಸಮಾಧಾನಪಡಿಸಲು ಇದನ್ನು ಮಾಡಲಾಗುತ್ತದೆ. ಜೀವಂತ ವ್ಯಕ್ತಿಗೆ, ಈ ಆಚರಣೆಯನ್ನು ಮಾಡುವುದು ಒಂದು ಕಠಿಣ ಹೆಜ್ಜೆಯಾಗಿದೆ, ಇದು ಕುಟುಂಬ ಮತ್ತು ಸಮಾಜದಿಂದ ಸಂಪೂರ್ಣ ಪ್ರತ್ಯೇಕತೆಯನ್ನು ಸೂಚಿಸುತ್ತದೆ.

ನಗರ ಪ್ರದೇಶಗಳಲ್ಲಿ ಪ್ರೇಮ ವಿವಾಹಗಳು ಮತ್ತು ವೈಯಕ್ತಿಕ ಆಯ್ಕೆಗಳು ಹೆಚ್ಚಾಗಿ ಸ್ವೀಕರಿಸಲ್ಪಡುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕಟ್ಟುನಿಟ್ಟಾದ ಸಾಮಾಜಿಕ ರೂಢಿಗಳನ್ನು ಅನುಸರಿಸಲಾಗುತ್ತದೆ.