ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ಸ್‌ಟಾವೇರ್ ಇಂಜಿನಿಯರ್ ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಾಣಿಗರಹಳ್ಳಿಯ ಅಪಾರ್ಟ್‌ಮೆಂಟ್ ನಿವಾಸಿ ಪ್ರಶಾಂತ್ ನಾಯರ್ (40) ಮೃತ ಟೆಕ್ಕಿ. ಏಪ್ರಿಲ್ 4ರ ರಾತ್ರಿ 11 ಗಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮೃತನ ತಂದೆ ಎಂ.ಎನ್. ಕುಟ್ಟಿ ಎಂಬಾತ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಿನೋವ ಕಂಪನಿಯ ಉದ್ಯೋಗಿ ಪ್ರಶಾಂತ್, 12 ವರ್ಷಗಳ ಹಿಂದೆ ಪೂಜಾ ನಾಯರ್ ಎಂಬಾಕೆ ಜತೆಗೆ ಮದುವೆ ಆಗಿದ್ದು, ದಂಪತಿಗೆ 8 ವರ್ಷದ ಹೆಣ್ಣು ಮಗುವಿದೆ. ಹೆಣ್ಣೂರಿನಲ್ಲಿ ನೆಲೆಸಿದ್ದ ಕುಟುಂಬದಲ್ಲಿ ಕಳೆದೊಂದು ವರ್ಷದಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.
ಗುರು ಹಿರಿಯರು ಬುದ್ಧಿವಾದ ಹೇಳಿದರು ಸರಿ ಹೋಗಿರಲಿಲ್ಲ. ಕೊನೆಗೆ ದಂಪತಿ ಬೇರೆ ್ಲ್ಯಾಟ್‌ಗೆ ಹೋಗಿ ವಾಸವಾಗಿದ್ದರು. ಸ್ವಲ್ಪ ದಿನಕ್ಕೆ ಪತ್ನಿ ಪೂಜಾ ನಾಯರ್ ಬೇರೆಗೆ ವಾಸವಾಗಿದ್ದರು. ಒಂಟಿ ಆಗಿದ್ದ ಪ್ರಶಾಂತ್, ಏಪ್ರಿಲ್ 4ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.