ನ್ಯೂಸ್

ತಾಂತ್ರಿಕ ನೆರವಿನ ನೆಪದಲ್ಲಿ ಮೋಸ ಮಾಡುತ್ತಿದ್ದ ಫೇಕ್​ ಕಾಲ್​ ಸೆಂಟರ್​​

ನವದೆಹಲಿ: ನಿಮ್ಮ ಡಿವೈಸ್​ ಹ್ಯಾಕ್​ ಆಗಿದೆ ಎಂದು ಹೇಳಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ದೊಡ್ಡ ಜಾಲವನ್ನೇ ಭೇದಿಸಿರುವ ಪೊಲೀಸರು, ನಕಲಿ ಕಾಲ್​ ಸೆಂಟರ್​ವೊಂದನ್ನೇ ಪತ್ತೆ ಹಚ್ಚಿದ್ದಾರೆ.

ದೆಹಲಿಯ ರಜೌರಿ ಗಾರ್ಡನ್​​ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಫೇಕ್​ ಕಾಲ್​ ಸೆಂಟರ್​ ನಡೆಸುತ್ತಿದ್ದ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 20 ಕಂಪ್ಯೂಟರ್ ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕೆಲವರಿಗೆ ಪಾಪ್​ ಮೆಸೇಜ್​ಗಳನ್ನು ಕಳುಹಿಸಿ, ನಿಮ್ಮ ಡಿವೈಸ್​ ಹ್ಯಾಕ್​ ಆಗಿದೆ ಹಾಗೂ ಮಾಲ್​ವೇರ್​ಗಳಿಗೆ ಒಳಗಾಗಿದೆ ಎನ್ನುತ್ತಿದ್ದರು. ಮಾತ್ರವಲ್ಲ ಅವರಿಗೆ ಮೈಕ್ರೋಸಾಫ್ಟ್​ ಕಡೆಯಿಂದ ತಾಂತ್ರಿಕವಾಗಿ ಸಹಾಯ ಮಾಡುವುದಾಗಿ ಹೇಳಿ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)