Failed Payment: ಮನೆಯಲ್ಲಿ ಬಾಳ ಸಂಗಾತಿ ಇದ್ದರೂ ಮತ್ತೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತಿರಾಯನ ಕರ್ಮಕಾಂಡ ಆತ ಮಾಡಿಕೊಂಡ ಒಂದು ಸಣ್ಣ ಎಡವಟ್ಟಿನಿಂದ ಬಟಾಬಯಲಾಗಿದೆ.
ಇದನ್ನೂ ಓದಿ: ಭೀಮೆಗೆ ಒಳ ಹರಿವು ಹೆಚ್ಚಾದಲ್ಲಿ ನದಿ ದಂಡೆಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ-ಬಿ.ಫೌಜಿಯಾ ತರನ್ನುಮ್
'ದಿ ಸೌತ್ ಚೀನಾ ಮಾರ್ನಿಂಗ್' ಪೋಸ್ಟ್ ವರದಿ ಪ್ರಕಾರ, ತನ್ನ ಹೆಂಡತಿ ಕಣ್ತಪ್ಪಿಸಿ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಚೀನಾದ ವ್ಯಕ್ತಿ, ಮೆಡಿಕಲ್ನಲ್ಲಿ ಗರ್ಭನಿರೋಧಕ ಮಾತ್ರೆಗಳನ್ನು ರಹಸ್ಯವಾಗಿ ಖರೀದಿಸಲು ಮಾಡಿದ ಪ್ರಯತ್ನ ಆನ್ಲೈನ್ ಪೇಮೆಂಟ್ನ ತಾಂತ್ರಿಕ ದೋಷದಿಂದ ವಿಫಲಗೊಂಡಿತು. ಈ ವೇಳೆ ಅಲ್ಲಿಂದ ಹೊರಟುಹೋದ ಈತ, ಮತ್ತೊಂದು ಮೆಡಿಕಲ್ನಲ್ಲಿ ಮಾತ್ರೆಗಳನ್ನು ಖರೀದಿಸಿದ್ದಾನೆ. ಇದೆಲ್ಲ ಮುಗಿಸಿಕೊಂಡು ಮನೆಗೆ ತೆರಳಿದವನಿಗೆ ಬಂದ ದೂರವಾಣಿ ಕರೆ ಆತನ ಅಸಲಿ ಮುಖವನ್ನು ಪತ್ನಿಯ ಎದುರೇ ಬಟಾಬಯಲು ಮಾಡಿದೆ.
ಮೊದಲಿಗೆ ಪೇಮೆಂಟ್ ಫೇಲ್ ಆಗಿದೆ ಎಂದಿದ್ದ ಫಾರ್ಮಸಿ ಸಿಬ್ಬಂದಿ, ನಂತರದಲ್ಲಿ ಪಾವತಿಯಾದ ವಿಚಾರವನ್ನು ತಿಳಿಸಿ, ನಿಮ್ಮ 200 ರೂ. ಹಣವನ್ನು ವಾಪಾಸ್ ಪಡೆಯುವಂತೆ ಹೇಳಲು ಆತನ ಸದಸ್ಯತ್ವ ಕಾರ್ಡ್‌ಗೆ ಲಿಂಕ್ ಮಾಡಲಾದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಆಕಸ್ಮಿಕವಾಗಿ ಈ ಕರೆಯನ್ನು ಆತನ ಪತ್ನಿ ಸ್ವೀಕರಿಸಿದ್ದು, ಮೆಡಿಕಲ್ನವರು ಹೇಳಿದ ಖರೀದಿ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ, ಅದು ಗರ್ಭನಿರೋಧಕ ಮಾತ್ರೆಗಳು ಎಂದು ಹೇಳಿದ್ದೇ ತಡ ಪತಿಯ ಕರ್ಮಕಾಂಡವನ್ನು ಬಯಲಿಗೆ ಎಳೆಯುವಲ್ಲಿ ಪತ್ನಿ ಯಶಸ್ವಿಯಾಗಿದ್ದಾಳೆ.
ಈ ಘಟನೆ ಬಳಿಕ ಫಾರ್ಮಸಿ ಸಿಬ್ಬಂದಿಯನ್ನು ದೂಷಿಸಿರುವ ವ್ಯಕ್ತಿ, ಇವರಿಂದ ಎರಡು ಕುಟುಂಬಗಳು ಸರ್ವನಾಶವಾಗಿವೆ ಎಂದು ಪಿಂಗ್‌ಗ್ಯಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).