ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ತಾಂಡವಪುರ ಕಾಲೇಜಿನಲ್ಲಿ ಪ್ಯಾಕಲ್ಟಿ ಡೆವಲಪ್ರೈಂಟ್ /ಅಧ್ಯಾಪಕರ ವಿಕಾಸನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಇದು ಮಹಾರಾಜ ಎಜುಕೇಷನ್ ಟ್ರಸ್ಟ್ ನ ಮೈಸೂರಿನ ಎರಡನೇ ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಮೂಲಕ ದೇಶದ ತಾಂತ್ರಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವುದು. ನಮ್ಮ ಕಾಲೇಜಿನ ಮುಖ್ಯ ಧೈಯವಾಗಿದೆ.
ಕಾಲೇಜಿನಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ತನಕ ರಿಸರ್ಚ್ ಅಂಡ್ ಇನ್ನೋವೇಶನ್ ಸೆಂಟರ್ ಇನ್ ಅಸೋಸಿಯೇಷನ್ ವಿಥ್ IQAC ವತಿಯಿಂದ “ಸಂಶೋಧನಾ ಪತ್ರಿಕೆಯನ್ನು ಮಂಡಿಸುವಲ್ಲಿ ಬಳಸಬಹುದಾದ ಪರಿಣಾಮಕಾರಿ ತಂತ್ರಗಳು" ಎಂಬ ವಿಷಯವನ್ನು ಕುರಿತು ಕಾರ್ಯಗಾರ ಏರ್ಪಡಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಡಾ. ಗುರು ಎಸ್,ಹಿರಿಯ ಪ್ರಾಧ್ಯಾಪಕರು ಸಿಎಸ್‌ಸಿ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ, ಡಾ.ಮನೋಹರ್ ಪೈ ಎಂ ಎಂ ರವರು ಹಿರಿಯ ಪ್ರಾಧ್ಯಾಪಕರು ಮಣಿಪಾಲ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್, ಡಾ. ರಾಧಿಕಾ ಎಂ ಪೈ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರು ಮಣಿಪಾಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮಣಿಪಾಲ್ ಹಾಗೂ ಡಾ.ಎಸ್ ಉಮೇಶ್ ರವರು ಹಿರಿಯ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯ ಆಗಮಿಸಿದರು.
ಬಂದಂತಹ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಅಧ್ಯಾಪಕ ಬಳಗಕ್ಕೆ ತಮ್ಮದೇ ಆದಂತಹ ಕ್ಷೇತ್ರದಲ್ಲಿ ತಾವುಗಳು ಸಾಧಿಸಿರುವ ವಿನೂತನ ಸಂಶೋಧನಾ ಪರಿಣತಿಯನ್ನ ಸವಿವರವಾಗಿ ತಿಳಿಸಿಕೊಟ್ಟರು.
ಶ್ರೀಯುತ ಡಾ. ಗುರು ಎಸ್ ಅವರು ಸಂಶೋಧನೆಯಲ್ಲಿ ರಿಸರ್ಚ್ ಅಂಡ್ ಡಾಕುಮೆಂಟ್ ಸಂಶೋಧನೆಯಲ್ಲಿ ಅತಿ ಮುಖ್ಯವಾದ ಭಾಗವೆಂದು ಸವಿವರವಾಗಿ ತಿಳಿಸಿಕೊಟ್ಟರು, ಶ್ರೀಯುತ ಡಾ. ಎಸ್ ಉಮೇಶ್ ರವರು ರಿಸರ್ಚ್ ಫಂಡಿಂಗ್ ಏಜೆನ್ಸಿ ಎಂಬ ವಿಷಯದ ಕುರಿತು ತಿಳಿಸಿದರು. ಹಾಗೂ ಶ್ರೀಯುತ ಡಾ. ಮನೋಹರ್ ಪೈ ಎಂ ಎಂ ರವರು ವೇ ಆಫ್ ಕಂಡಕ್ಟಿಂಗ್ ಎಫೆಕ್ಟಿವ್ ಲಿಟರೇಚರ್ ರಿವ್ಯೂ ಎಂಬುದನ್ನು ಹಂತ ಹಂತವಾಗಿ ಬಂದಂತಹ ಸಂಪನ್ಮೂಲ ವ್ಯಕ್ತಿಗಳು ಅಧ್ಯಾಪಕ ಬಳಗಕ್ಕೆ ಬಹಳ ವಿಸ್ಸತವಾಗಿ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.
ಈ ಒಂದು ಕಾರ್ಯಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದಂತಹ ಶ್ರೀಯುತ ಡಾ. ವೈ ಟಿ ಕೃಷ್ಣಗೌಡ ರವರು ಹಾಗೂ ಮಹಾರಾಜ ಎಜುಕೇಶನ್ ಟ್ರಸ್ಟ್ ಮೈಸೂರಿನ ಜಂಟಿ ಕಾರ್ಯದರ್ಶಿಗಳಾದ ಶ್ರೀಯುತ ಡಾ.ಎಚ್ ಕೆ ಚೇತನ್ ರವರು ಮತ್ತು ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಅಧ್ಯಾಪಕ ಬಳಗ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.