ಮುಂಬೈ: ವಿಶ್ವದ ಟಾಪ್ಮೋಸ್ಟ್ ಉದ್ಯಮಿಗಳಲ್ಲಿ ಒಬ್ಬರಾದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್ ಟಾಟಾ (86) (Ratan Tata) ಅವರ ಸಾವು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದ್ದು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅಕ್ಟೋಬರ್ 09ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ (Breach Candy Hospital) ಕೊನೆಯುಸಿರೆಳೆದಿದ್ದರು. ಉದ್ಯಮದ ಹೊರತಾಗಿ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರತನ್ ಟಾಟಾ (Ratan Tata) ತಮ್ಮ ಪ್ರಾಣಿಪ್ರೀತಿಗೆ ಹೆಸರುವಾಸಿಯಾಗಿದ್ದರು ಎಂದರೆ ತಪ್ಪಾಗಲಾರದು.
ರತನ್ ಟಾಟಾ ಅವರ ನಿಧನದ ದಿನ ಅವರ ಸಾಕು ನಾಯಿ (Pet Dog) ಗೋವಾ (Goa) ಮೃತದೇಹದ ಮುಂದೆ ಕಣ್ಣೀರು ಹಾಕಿತ್ತು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗಿತ್ತು. ಇದೀಗ ರತನ್ ಟಾಟಾ (Ratan Tata) ಅವರ ಪ್ರಿಯವಾಶ ಶ್ವಾನ ಗೋವಾ ಮೃತಪಟ್ಟಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಕಂಬನಿ ಮಿಡಿದಿದ್ಧಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಅವಕಾಶ ನೀಡಿದಂತೆ ಈತನಿಗೂ ಕೊಡಿ; ಬಾಬರ್ ಉಲ್ಲೇಖಿಸಿ ಪಾಕ್ ಪ್ಲೇಯರ್ನ ಟ್ವೀಟ್ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮೆಸ್ಸೇಜ್ ನೋಡುವುದಾದರೆ ರತನ್ ಟಾಟಾ (Ratan Tata) ಅವರ ಪ್ರೀತಿಯ ಶ್ವಾನ ಗೋವಾ (Pet Dog Goa) ಮಾಲೀಕರ ನಿಧನದ ಆಘಾತದಿಂದ ಇಹಲೋಕ ತ್ಯಜಿಸಿದೆ ಎಂದು ಶೇರ್ ಮಾಡಲಾಗಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಅನೇಕರು ಸಂತಾಪ ಸೂಚಿಸಿದ್ದು, ಇದು ಸಂಪೂರ್ಣ ನಕಲಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದು, ಗೋವಾ (Goa) ಬದುಕಿರುವುದಾಗಿ ತಿಳಿಸಿದ್ದಾರೆ.
ತಮ್ಮ ಪ್ರಾಣಿಪ್ರೀತಿಯಿಂದಲೇ ಸಾಕಷ್ಟು ಖ್ಯಾತಿ ಪಡೆದಿರುವ ಮುಂಬೈ ಮೂಲದ ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಡಾಲ್ಕರ್ (Sudhir Kudalkar), ಈ ಬಗ್ಗೆ ಮಾತನಾಡಿದ್ದು, ಗೋವಾ (Goa) ಸತ್ತಿದೆ ಎಂಬ ವಿಚಾರ ಸತ್ಯಕ್ಕೆ ದೂರವಾಗಿದ್ದು, ರತನ್ ಟಾಟಾ (Ratan Tata) ಅವರ ಸಾಕು ನಾಯಿ ಗೋವಾ (Goa) ಮಾಲೀಕರ ನಿಧನದ ಮೂರು ದಿನಗಳ ನಂತರ ಸತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಆದರೆ, ನಾನು ಸ್ವತಃ ಪರಿಶೀಲಿಸಿದ್ದು, ಗೋವಾ ಬದುಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು (Fake News) ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ಧಾರೆ.