ಮುಂಬೈ: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಇತ್ತೀಚೆಗೆ ತಮ್ಮ ಬ್ಲಾಗ್ ಪೋಸ್ಟ್ ಒಂದರಲ್ಲಿ ಅಮಿತಾಭ್ ಈ ವದಂತಿಗಳನ್ನು ನಿರಾಕರಿಸಿದ್ದರು. ಸದ್ಯ ಜಾಲತಾಣಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರ ಆಧಾರದ ಮೇಲೆ ಐಶ್ವರ್ಯಾ ರೈ ತಮ್ಮ ಹೆಸರಿನ ಮುಂದಿರುವ ಬಚ್ಚನ್ ಉಪನಾಮವನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.(Fact Check)
ಇದನ್ನು ಓದಿ: Dhanush V/S Nayanthara | ಧನುಷ್ ಲೀಗಲ್ ನೋಟಿಸ್ಗೆ ಉತ್ತರಿಸಿದ ಲೇಡಿ ಸೂಪರ್ಸ್ಟಾರ್; ನಯನತಾರಾ ವಕೀಲರು ಹೇಳಿದಿಷ್ಟು..
ವಾಸ್ತವವಾಗಿ ಐಶ್ವರ್ಯಾ ರೈ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಐಶ್ವರ್ಯಾ ರೈ ವೇದಿಕೆಗೆ ಬಂದ ಕೂಡಲೇ ಅವರ ಹೆಸರು ದೊಡ್ಡ ಪರದೆಯಲ್ಲಿ ಮಿನುಗುತ್ತದೆ. ಆದರೆ ಅದರಲ್ಲಿ ಐಶ್ವರ್ಯಾ ರೈ ಬಚ್ಚನ್ ಬದಲಿಗೆ ಐಶ್ವರ್ಯಾ ರೈ ಎಂದು ಮಾತ್ರ ಇದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ವಿಚ್ಛೇದನದ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಆದರೆ ಐಶ್ವರ್ಯಾ ನಿಜವಾಗಿಯೂ ತಮ್ಮ ಹೆಸರಿನಿಂದ 'ಬಚ್ಚನ್' ಎಂಬ ಉಪನಾಮವನ್ನು ತೆಗೆದುಹಾಕಿದ್ದಾರೆಯೇ? ಈ ವೈರಲ್ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮ ಮುಗಿಸಿ ಐಶ್ವರ್ಯಾ ಈಗ ಮುಂಬೈಗೆ ಮರಳಿದ್ದಾರೆ. ನವೆಂಬರ್ 28ರಂದು ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇನ್ನೂ ಐಶ್ವರ್ಯಾ ರೈ ಬಚ್ಚನ್ ಎಂದೇ ಇದೆ. ಇನ್‌ಸ್ಟಾ ಹ್ಯಾಂಡಲ್‌ನ ಹೆಸರು ಐಶ್ವರ್ಯರೈಬಚ್ಚನ್_ಆರ್ಬ್ ಎಂದಿದೆ. ದುಬೈ ಸಮಾರಂಭದಲ್ಲಿ ಐಶ್ವರ್ಯಾ ಅವರ ಅಧಿಕೃತ ಹೆಸರನ್ನು ಮಾತ್ರ ಬಳಸಲಾಗಿದೆ. ಬಚ್ಚನ್ ಉಪನಾಮವು ಹೆಸರಿನಲ್ಲಿ ಇಲ್ಲದಿದ್ದರೆ ನಟಿ ಅದನ್ನು ತೆಗೆದುಹಾಕಿದ್ದಾರೆ ಅಥವಾ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ಅರ್ಥವಲ್ಲ. (ಏಜೆನ್ಸೀಸ್)