ನವದೆಹಲಿ: ಭಾರತದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘಟನೆಗಳು ಫೇಸ್ಬುಕ್ ನಿಯಂತ್ರಿಸುತ್ತಿವೆ ಎಂಬ ವಾದವೀಗ ಭಾರಿ ಚರ್ಚೆಯಲ್ಲಿದೆ ಹಾಗೂ ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದ ಮಾಧ್ಯಮವೊಂದರ ವರದಿಯನ್ನು ಪ್ರಸ್ತಾಪಿಸಿ, ಭಾರತದಲ್ಲಿ ದ್ವೇಷಕಾರುವ ಹೇಳಿಕೆಗಳ ನಿಯಮವನ್ನು ಬಿಜೆಪಿ ನಾಯಕರ ವಿರುದ್ಧ ಜಾರಿಗೊಳಿಸಲು ಫೇಸ್ಬುಕ್ ಹಿಂಜರಿಯುತ್ತಿದೆ. ಫೇಸ್ಬುಕ್ ಹಾಗೂ ವಾಟ್ಸ್ಯಾಪ್ ನಿಯಂತ್ರಿಸುವ ಬಿಜೆಪಿ ಹಾಗೂ ಆರ್ಎಸ್ಎಸ್ ಸುಳ್ಳುಸುದ್ದಿ ಮತ್ತು ದ್ವೇಷಭಾವವನ್ನು ಬಿತ್ತುತ್ತಿವೆ. ಆ ಮೂಲಕ ಮತದಾನ ವ್ಯವಸ್ತೆ ಮೇಲೆ ಪ್ರಭಾವ ಬೀರುತ್ತಿವೆ. ಇದನ್ನು ಅಮೆರಿಕ ಮಾಧ್ಯಮ ಬಯಲು ಮಾಡಿದೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಈ ಬಗ್ಗೆ ಪ್ರತಿಕ್ರಿಯಸಿದ್ದಾರೆ. ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಕೂಡ ಇದೊಂದು ಆಘಾತಕಾರಿ ಸಂಗತಿ ಎಂದೇ ಹೇಳಿದ್ದಾರೆ.
ಇದನ್ನೂ ಓದಿ; ಕರೊನಾ ಸಂಕಷ್ಟದ ನಡುವೆಯೇ ಮುಂಗಾರು ಅಧಿವೇಶನ; ಸಂಸತ್ ಕಲಾಪಕ್ಕೆ ನಡೆಯುತ್ತಿರುವ ಸಿದ್ಧತೆ ಹೇಗಿದೆ ಗೊತ್ತೆ?
ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರವಿಶಂಕರ್ ಪ್ರಸಾದ್, ಕೈಲಾಗದವರಿಗೆ ತಮ್ಮ ಪಕ್ಷದಲ್ಲಿರುವ ಜನರ ಮೇಲೆಯೇ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ. ಆದರೆ, ಇಡೀ ಜಗತನ್ನು ಆರ್ಎಸ್ಎಸ್ ಹಾಗೂ ಬಿಜೆಪಿ ನಿಯಂತ್ರಿಸುತ್ತಿದೆ ಎಂದುಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಚುನಾವಣೆಗೂ ಮುನ್ನ ಕೇಂಬ್ರಿಡ್ಜ್ ಅನಾಲಿಟಿಕಾ ಹಾಗೂ ಫೇಸ್ಬುಕ್ನ ಮಾಹಿತಿ ಸಂಗ್ರಹಿಸಿ ಸಿಕ್ಕಿ ಬಿದ್ದಿದೀರಿ. ಈಗ ನಮ್ಮನ್ನು ಪ್ರಶ್ನಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ಅಮೆರಿಕದ ವಾಲ್ಸ್ಟ್ರಿಟ್ ಜರ್ನಲ್ನಲ್ಲಿ 'Facebook Hate-Speech Rules Collide With Indian Politics ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಿತ್ತು.