Extramarital affair: ವಿವಾಹೇತರ ಸಂಬಂಧ ಇಟ್ಟುಕೊಳ್ಳಬಾರದು ಎಂದು ಎಚ್ಚರಿಸಿದ್ದಕ್ಕೆ ವಿವಾಹಿತ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ(ಸೆ.3) ತೆಲಂಗಾಣದ ಮೆದಕ್ ಜಿಲ್ಲೆಯ ವ್ಯಾಪ್ತಿಯ ನಾಗಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹಿಳೆಯೊಬ್ಬರು (28) ಅದೇ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಆಕೆಯ ಪತಿಗೆ ಅನುಮಾನ ಬಂದು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಆಕೆಯ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹಿನ್ನೆಲೆ ಪತಿ ಸೆ.1ರ ಸಂಜೆ ಪತ್ನಿಯ ಮನೆಯವರಿಗೆ ಕರೆ ಮಾಡಿ ಹಿರಿಯರ ಸಮ್ಮುಖದಲ್ಲಿ ಮಾತನಾಡಿದ್ದಾನೆ. ಈ ಕ್ರಮದಲ್ಲಿ ಅಸಮಾಧಾನಗೊಂಡ ಆಕೆ ಮನೆಯೊಳಗೆ ಹೋಗಿ ಬಾಗಿಲು ಲಾಕ್ ಮಾಡಿ ಕೀಟನಾಶಕ ಕುಡಿದಿದ್ದಾಳೆ.
ಇದನ್ನೂ ಓದಿ:ಪತ್ನಿಯ ಶಿರಚ್ಚೇದ ಮಾಡಿ, ದೇಹವನ್ನು 17 ಪೀಸ್ ಮಾಡಿ ನಗರದಾದ್ಯಂತ ಎಸೆದ ಪತಿ: ಕಾರಣ ಗೊತ್ತಿಲ್ಲ| Wife Murder
ಬಾಗಿಲು ಹೊಡೆದು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)