ನ್ಯೂಸ್

ಪೊಲೀಸರ ಸೋಗಿನಲ್ಲಿ ಸುಲಿಗೆ

ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಸಿದ ದುಷ್ಕರ್ಮಿಗಳು 1.25 ಲಕ್ಷ ರೂ. ಮತ್ತು ಚಿನ್ನದ ಸರ ಸುಲಿಗೆ ಮಾಡಿದ್ದಾರೆ.

ಕೋರಮಂಗಲ ನಿವಾಸಿ ಶರತ್ (50) ಸುಲಿಗೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ಇದೇ ತಿಂಗಳು 23ರ ರಾತ್ರಿ 8.45ರಲ್ಲಿ ಕಾರಿನಲ್ಲಿ ಶರತ್ ತನ್ನ ಸ್ನೇಹಿತರೊಂದಿಗೆ ಭಾಷ್ಯಂ ಸರ್ಕಲ್ ಹತ್ತಿರ ಬಂದಿದ್ದ. ಅದೇ ವೇಳೆಗೆ ಅಪರಿಚಿತ ವ್ಯಕ್ತಿ ಸ್ಕೂಟರ್‌ನಲ್ಲಿ ಕಾರಿನ ಬಳಿಗೆ ಬಂದು, ‘ನಾನು ಪೊಲೀಸ್, ನನ್ನ ಜತೆ ಠಾಣೆಗೆ ಬನ್ನಿ’ ಎಂದು ಹೇಳಿ ಶರತ್ ಬಳಿಯಿದ್ದ ಮೊಬೈಲ್ ಕಸಿದುಕೊಂಡಿದ್ದ. ಅಲ್ಲಿಂದ ಸ್ಕೂಟರ್‌ನಲ್ಲಿ ಶರತ್‌ನನ್ನು ಕೂರಿಸಿಕೊಂಡು ಅರಮನೆ ರಸ್ತೆ ಶೀಷ ಮಹಲ್ ಹತ್ತಿರದ ಸರ್ವೀಸ್ ರಸ್ತೆಗೆ ಕರೆದುಕೊಂಡು ಹೋಗಿ ಅಲ್ಲಿ ಪರ್ಸ್ ಕಿತ್ತುಕೊಂಡು, 15 ಸಾವಿರ ರೂ. ನಗದು ಎತ್ತಿಕೊಂಡಿದ್ದ.

ಅಲ್ಲದೆ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು, ಅಲ್ಲಿಂದ ಮೆಜೆಸ್ಟಿಕ್ ಹತ್ತಿರದ ಕೆನರಾ ಬ್ಯಾಂಕ್ ಬಿಲ್ಡಿಂಗ್ ಬಳಿಗೆ ಕರದೊಯ್ದು ಶರತ್ ಸ್ನೇಹಿತರ ಕಡೆಯಿಂದ 40 ಸಾವಿರ ರೂ. ಅನ್ನು ವ್ಯಾಲೆಂಟ್‌ಗೆ ಹಾಕಿಸಿಕೊಂಡಿದ್ದ. ಇಷ್ಟೇ ಅಲ್ಲದೆ, ಶರತ್ ಕಡೆಯಿಂದ ಮತ್ತಿಬ್ಬರು ಸ್ನೇಹಿತರಿಗೆ  ಮಾಡಿಸಿ ಅವರಿಂದಲೂ 40 ಸಾವಿರ ರೂ. ಮತ್ತು 30 ಸಾವಿರ ರೂ. ಅನ್ನು ವರ್ಗಾವಣೆ ಮಾಡಿಸಿಕೊಂಡು ಬಿಟ್ಟು ಕಳುಹಿಸಿದ್ದ. ನೊಂದ ಶರತ್, ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.