ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳ ಸಿಂಧುತ್ವವನ್ನು 2021 ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ. ಕರೊನಾ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಫಿಟ್ನೆಸ್, ಪರ್ಮಿಟ್, ಚಾಲನಾ ಪರವಾನಗಿ ಮತ್ತು ರಿಜಿಸ್ಟ್ರೆಷನ್ ಸರ್ಟಿಫಿಕೆಟ್ ಮುಂತಾದವುಗಳ ಸಿಂಧುತ್ವ ದಿನಾಂಕ ವಿಸ್ತರಣೆಗೊಂಡಿದೆ.
2020 ೆಬ್ರವರಿ 1ರಿಂದ ಅವಧಿ ಮುಗಿದ ಅಥವಾ 2021 ಸೆಪ್ಟೆಂಬರ್ 30ರೊಳಗೆ ವಾಯಿದೆ ಅಂತ್ಯಗೊಳ್ಳುವ ಈ ಎಲ್ಲ ದಾಖಲೆಗಳಿಗೆ ಇದು ಅನ್ವಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಇದರಿಂದ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಸಹಾಯಕವಾಗುತ್ತದೆ. ಈ ಎಲ್ಲ ದಾಖಲೆಗಳನ್ನು 2021 ಸೆಪ್ಟೆಂಬರ್ 30ರವರೆಗೆ ಸಿಂಧುವಾಗಿ ಪರಿಗಣಿಸುವಂತೆ ಸಂಬಂಧಪಟ್ಟ ಎಲ್ಲ ಪ್ರಾಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವಾಲಯ ತಿಳಿಸಿದೆ.