ನ್ಯೂಸ್

ಹೋಟೆಲ್, ವಾಣಿಜ್ಯ ಉದ್ಯಮಗಳ ಸಮಯ ವಿಸ್ತರಿಸಿ

ಮೈಸೂರು: ಹೋಟೆಲ್ ಉದ್ಯಮ, ವಾಣಿಜ್ಯ ಉದ್ಯಮಗಳ ಸಮಯವನ್ನು ರಾತ್ರಿ 1 ಗಂಟೆಯವರೆಗೆ ವಿಸ್ತರಿಸಿ ಹೊರಡಿಸಿರುವ ಸರ್ಕಾರದ ಆದೇಶವನ್ನು ಮೈಸೂರು ನಗರದಲ್ಲೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಬುಧವಾರ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಲಾಯಿತು. ಸಂಘದ ಕಾರ್ಯದರ್ಶಿ ಎ.ಆರ್.ರವೀಂದ್ರಭಟ್, ಮುಖಂಡರಾದ ರವಿಶಾಸ್ತ್ರಿ, ಶಿವಕುಮಾರ್, ಸುಬ್ರಮಣ್ಯ ತಂತ್ರಿ, ಮುರಳಿ ಇದ್ದರು.