ನ್ಯೂಸ್

ಭಾರತದಿಂದ ಚೀನಾಕ್ಕೆ ಹೆಚ್ಚಿದ ರಫ್ತು; ಶೇ. 16 ರಫ್ತು ಹೆಚ್ಚಳ, ಆಮದು ಶೇ. 13 ಇಳಿಕೆ

ನವದೆಹಲಿ: ಗಡಿಯಲ್ಲಿ ಮುಂದುವರಿದ ಉದ್ವಿಗ್ನತೆ ಹಾಗೂ ಕರೊನಾ ಸಾಂಕ್ರಾಮಿತೆಯಿಂದ ಉಂಟಾದ ಆರ್ಥಿಕ ಪರಿಣಾಮಗಳ ನಡುವೆಯೂ ಈ ವರ್ಷದ 11 ತಿಂಗಳಲ್ಲಿ ಭಾರತದಿಂದ ಚೀನಾಕ್ಕೆ ರಫ್ತು ಪ್ರಮಾಣ ಶೇಕಡ 16ರಷ್ಟು ಏರಿಕೆಯಾಗಿದೆ. ಇದೇ ವೇಳೆಗೆ ಚೀನಾದಿಂದ ಭಾರತಕ್ಕೆ ಆಮದಾಗುವಿಕೆಯಲ್ಲಿ ಶೇಕಡ 13 ಇಳಿಕೆ ದಾಖಲಾಗಿದೆ.

ಕರೊನಾ ಸಾಂಕ್ರಾಮಿಕತೆ ಯಿಂದಾಗಿ ಭಾರತದಲ್ಲಿ ಆಂತರಿಕ ಬೇಡಿಕೆ ಕುಸಿದಿರುವುದು ಕೂಡ ಚೀನಾದಿಂದ ಭಾರತಕ್ಕೆ ರಫ್ತು ಕುಸಿಯಲು ಕಾರಣ ಎಂದು ಸೋಮವಾರ ಪ್ರಕಟವಾದ ಚೀನಾದ ಕಸ್ಟಮ್್ಸ ಇಲಾಖೆಯ ಅಂಕಿ-ಅಂಶ ತಿಳಿಸಿದೆ. ಈ ವರ್ಷ ಜನವರಿಯಿಂದ ನವೆಂಬರ್​ವರೆಗೆ ಭಾರತಕ್ಕೆ ಚೀನಾ 4,36,024 ಕೋಟಿ ರೂ. (59 ಬಿಲಿಯನ್ ಡಾಲರ್) ಮೌಲ್ಯದ ಸಾಮಗ್ರಿಗಳನ್ನು ರಫ್ತು ಮಾಡಿದೆ.ಇದೇ ಅವಧಿಯಲ್ಲಿ ಭಾರತದಿಂದ 1,40,413 ಕೋಟಿ ರೂ. (19 ಬಿಲಿಯನ್ ಡಾಲರ್) ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ‘ಗ್ಲೋಬಲ್ ಟೈಮ್್ಸ‘ ವರದಿ ಮಾಡಿದೆ.

ಭಾರತ ದೊಡ್ಡ ರಾಷ್ಟ್ರ

2019ರಲ್ಲಿ ಚೀನೀ ಜೈವಿಕ ರಾಸಾಯನಿಕ ಗಳು, ರಸಗೊಬ್ಬರಗಳು, ಆಂಟಿಬಯೋಟಿಕ್​ಗಳು ಮತ್ತು ಅಲ್ಯುಮಿನಿಯಂ ಫಾಯ್್ಲ ಆಮದಿನಲ್ಲಿ ಭಾರತವೇ ದೊಡ್ಡ ದೇಶವಾಗಿತ್ತು ಎಂಬುದು ಬೀಜಿಂಗ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮಾಹಿತಿಯಿಂದ ತಿಳಿದು ಬಂದಿದೆ.

ರಾಜಕೀಯ ಮಾಡಿಲ್ಲ

ಪೂರ್ವ ಲಡಾಖ್​ನಲ್ಲಿ ವಾಸ್ತವ ಗಡಿ ರೇಖೆಯಲ್ಲಿ (ಎಲ್​ಎಸಿ) ಮೇ ತಿಂಗಳಿಂದಲೂ ಮುಂದುವರಿದಿರುವ ಗಡಿ ತಕರಾರನ್ನು ಚೀನಾ ರಾಜಕೀಯಗೊಳಿಸಲಿಲ್ಲ. ಹೀಗಾಗಿ ಭಾರತದಿಂದ ಆಮದು ಹೆಚ್ಚಳವಾಗಿದೆ ಎಂದು ಚೀನಾ ಹೇಳಿದೆ. ಆದರೆ, ಚೀನಾದಿಂದ ಆಮದು ಮಾಡಿಕೊಳ್ಳುವ ಮೇಲೆ ಭಾರತ ನಿರ್ಬಂಧ ವಿಧಿಸಿದೆ ಎಂದು ಟೀಕಿಸಿದೆ. ಚೀನಾ ಕುರಿತು ಭಾರತ ಹೊಂದಿರುವ ಪೂರ್ವಗ್ರಹಪೀಡಿತ ಧೋರಣೆಯೂ ಆಮದು ಕಡಿಮೆಯಾಗಿರುವುದಕ್ಕೆ ಕಾರಣ . ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಂಕ ಏರಿಕೆ, ಮೇಡ್ ಇನ್ ಚೀನಾ ಉತ್ಪನ್ನಗಳ ಮೇಲೆ ನಿರ್ಬಂಧ ಮುಂತಾದ ಕ್ರಮಗಳು ಈ ವಿಚಾರದಲ್ಲಿ ಪಾತ್ರ ವಹಿಸಿವೆ ಎಂದು ಪತ್ರಿಕೆ ಆರೋಪಿಸಿದೆ.