ನ್ಯೂಸ್

ಸ್ಫೋಟ ಬೆದರಿಕೆ, ವಾಪಸಾದ ವಿಮಾನ

manjunatha

ಕೋಲ್ಕತ: ಬಾಂಬ್ ಸ್ಪೋಟಿಸುವುದಾಗಿ ಮಹಿಳಾ ಪ್ರಯಾಣಿಕರೊಬ್ಬರು ಬೆದರಿಕೆ ಹಾಕಿದ್ದರಿಂದ ಏರ್​ಏಷ್ಯಾ ಇಂಡಿಯಾದ ವಿಮಾನವೊಂದು ಶನಿವಾರ ರಾತ್ರಿ ಕೋಲ್ಕತದ ವಿಮಾನ ನಿಲ್ದಾಣಕ್ಕೆ ತುರ್ತಾಗಿ ವಾಪಸಾಯಿತು.

114 ಪ್ರಯಾಣಿಕರಿದ್ದ ವಿಮಾನ ಶನಿವಾರ ರಾತ್ರಿ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಕೆಲ ಹೊತ್ತಿನಲ್ಲಿ ಓರ್ವ ಮಹಿಳೆ, ತಾನು ದೇಹಕ್ಕೆ ಬಾಂಬ್ ಕಟ್ಟಿಕೊಂಡಿದ್ದು ಯಾವ ಕ್ಷಣದಲ್ಲಾದರೂ ಸ್ಪೋಟಿಸಬಹುದು ಎಂಬ ಒಕ್ಕಣೆಯಿದ್ದ ಚೀಟಿಯನ್ನು ವಿಮಾನ ಸಿಬ್ಬಂದಿಗೆ ನೀಡಿದಳು. ಈ ಹಿನ್ನೆಲೆಯಲ್ಲಿ ವಿಮಾನ ಕೋಲ್ಕತಗೆ ವಾಪಸು ಬಂದಿತು.

ಮಹಿಳೆ ಮೋಹಿನಿ ಮಂಡಲ್​ರನ್ನು ತಪಾಸಣೆ ನಡೆಸಿದಾಗ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಆಕೆ ಕುಡಿದ ಮತ್ತಿನಲ್ಲಿದ್ದಳು ಎಂದು ವೈದ್ಯಕೀಯ ಪರೀಕ್ಷೆ ತಿಳಿಸಿದೆ.