ಭದ್ರಾವತಿಯಲ್ಲಿ ಏರ್ಪಡಿಸಿದ್ದ ಕೃಷ್ಣವೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು. 
ನ್ಯೂಸ್

ಮಕ್ಕಳಿಗೆ ಭಾರತೀಯ ಪರಂಪರೆ ಮಹತ್ವ ತಿಳಿಸಿ

ಭದ್ರಾವತಿ: ಭಾರತೀಯ ಪರಂಪರೆ, ಶಿಕ್ಷಣ, ಬದುಕಿನ ಸಂಗತಿಗಳನ್ನು ತಿಳಿಸುವ ಉದ್ದೇಶದಿಂದ ಕೃಷ್ಣವೇಷ ಪ್ರದರ್ಶನ ಹಾಗೂ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಹೊಸಳ್ಳಿಯ ಎಚ್.ಆರ್.ಶ್ರೀನಿವಾಸ್ ಹೇಳಿದರು.

ನಗರದ ತರುಣ ಭಾರತಿ ವಿಶ್ವಸ್ಥ ಮಂಡಳಿಯಿಂದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕೃಷ್ಣವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಭರತ ಖಂಡದಲ್ಲಿ ಜನಿಸಿದವರೆಲ್ಲರೂ ಭಾರತೀಯರೇ. ಸನಾತನ ಧರ್ಮ ವಿಶ್ವಕ್ಕೇ ಮಾರ್ಗದರ್ಶನ ಮಾಡುವಂಥದ್ದು ಎಂದು ತಿಳಿಸಿದರು.
ಇಂದಿನ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ತಾಯಂದಿರ ಮೇಲಿದೆ. ಮಕ್ಕಳು ಕೆಟ್ಟದ್ದನ್ನು ಬಹಳ ಬೇಗ ಅನುಸರಿಸಿ ಕಲಿಯುತ್ತಾರೆ. ಆದರೆ ಒಳ್ಳೆಯದನ್ನು ಕಲಿಯುವುದು, ಕಲಿಸುವುದು ಬಹಳ ಕಷ್ಟದ ಕೆಲಸ. ಕೃಷ್ಣನ ವೇಷ ಹಾಕಿಸಿ ಆನಂದಿಸಿದಂತೆ ಕೃಷ್ಣನ ಸಂಗತಿಗಳು, ಸಂದೇಶ, ವಿಚಾರಗಳನ್ನು ತಿಳಿಸಿಕೊಡಬೇಕು ಎಂದು ಮನವಿ ಮಾಡಿದರು.
ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಉತ್ತಮವಾಗಿ ಕೃಷ್ಣವೇಷ ಧರಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿ.ಎಚ್.ಶಿವಕುಮಾರ್, ಪ್ರಮುಖರಾದ ಎಂ.ಸುರೇಶ್, ಪೂರ್ಣಿಮಾ, ಎಸ್.ಸತೀಶ್, ಜ್ಯೋತಿಲಕ್ಷ್ಮೀ, ಸರ್ವಮಂಗಳಾ, ಶಾರದಾ ಶ್ರೀನಿವಾಸ್, ಚೈತ್ರ, ರಾಣಿ ಇತರರಿದ್ದರು.