ತೇರದಾಳದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಶನಲ್ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳಕ್ಕೆ ಮಹೇಶ ಆರ್.ಪಾಟೀಲ ಚಾಲನೆ ನೀಡಿದರು. ಡಾ.ಶಂಕರ ಅಥಣಿ, ಉಪಾಧ್ಯಕ್ಷ ಪರಪ್ಪಣ್ಣ ಕಾಲತಿಪ್ಪಿ, ಮಹೇಶ ಯಾದವಾಡ ಇತರರಿದ್ದಾರೆ. 
ನ್ಯೂಸ್

ಚಿಂತನಾ ಶಕ್ತಿ ವೃದ್ಧಿಗೆ ವಸ್ತು ಪ್ರದರ್ಶನ ಪೂರಕ

ದತ್ತಾತ್ರೇಯ ಪಿ ಕುಲಕರ್ಣಿ

ತೇರದಾಳ(ಗ್ರಾ): ಮಕ್ಕಳಲ್ಲಿಯ ಸೂಕ್ತ ಪ್ರತಿಭೆ ಹೊರಹಾಕಲು ವಸ್ತು ಪ್ರದರ್ಶನ ಒಳ್ಳೆಯ ವೇದಿಕೆ ಎಂದು ಮಹೇಶ ಆರ್.ಪಾಟೀಲ ಹೇಳಿದರು.

ಪಟ್ಟಣದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆ (ಸಿಬಿಎಸ್‌ಇ) ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಕುತೂಹಲ ಉಂಟುಮಾಡುತ್ತವೆ ಎಂದರು.

ಸಿಬಿಎಸ್‌ಇ ಚೇರ್ಮನ್ ಶಂಕರ ಮಂಗಸೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಶಂಕರ ಅಥಣಿ, ಉಪಾಧ್ಯಕ್ಷ ಪರಪ್ಪಣ್ಣ ಕಾಲತಿಪ್ಪಿ, ಮಹೇಶ ಯಾದವಾಡ, ರಮೇಶ ಅವರಾದಿ, ಮಲ್ಲಪ್ಪಣ್ಣ ಮುಕರಿ, ಮುತ್ತಪ್ಪ ಮಿರ್ಜಿ, ಶಂಕರ ಹೊಸಮನಿ, ಆಡಳಿತಾಧಿಕಾರಿ ಎಮ್.ಬಿ.ಮಾಳೇದ ಇದ್ದರು.