ನ್ಯೂಸ್

ಹಬ್ಬದ ಖುಷಿ ಹೆಚ್ಚಿಸುವಂಥ ನಿರ್ಧಾರ ತಳೆದ ಕೇಂದ್ರ ಸರ್ಕಾರ; ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕ ಇಳಿಕೆ

ದೆಹಲಿ: ಕಳೆದ ಕೆಲವು ದಿನಗಳಿಂದ ಪೆಟ್ರೋಲ್​-ಡೀಸೆಲ್​ ದರ ಏರಿಕೆ ಎಂಬ ಸುದ್ದಿಗಳನ್ನೇ ಕೇಳಿ ಕೇಳಿ ಬೇಸತ್ತಿದ್ದ ಜನರಿಗೆ ಇದೀಗ ಖುಷಿ ಪಡುವಂತಹ ವಿಷಯವೊಂದು ಹೊರಬಿದ್ದಿದೆ. ಹಾಗೆ ಸಾರ್ವಜನಿಕರಿಗೆ ಖುಷಿ ನೀಡುವಂಥ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಅಂದರೆ ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ. ಪೆಟ್ರೋಲ್​ ಮೇಲೆ 5 ರೂಪಾಯಿ ಹಾಗೂ ಡೀಸೆಲ್​ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ.

ವಿಶೇಷವೆಂದರೆ ಇಂದು ಮಧ್ಯರಾತ್ರಿಯಿಂದಲೇ ಈ ಸುಂಕ ಇಳಿಕೆ ಅನ್ವಯಿಸಲಿದ್ದು, ರಾತ್ರಿ 12ರ ಬಳಿಕ ಹೊಸ ದರದಲ್ಲಿ ಪೆಟ್ರೋಲ್​-ಡೀಸೆಲ್​ ಲಭಿಸಲಿದೆ. ಪರಿಣಾಮವಾಗಿ ಬಹಳ ದಿನಗಳ ಬಳಿಕ ಪೆಟ್ರೋಲ್​-ಡೀಸೆಲ್​ ದರದಲ್ಲಿ ಕೊಂಚ ಇಳಿಕೆ ಆಗಲಿದ್ದು, ಪರಿಷ್ಕೃತ ದರದ ಕುರಿತು ಮಧ್ಯರಾತ್ರಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.