ಶೃಂಗೇರಿ: ಅತಿಯಾಗಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಊಟ ಮಾಡುವಾಗ ಆಹಾರವನ್ನು ಹಾಳು ಮಾಡದೇ, ನಿಧಾನವಾಗಿ ಆಹಾರ ಸೇವಿಸಬೇಕು ಎಂದು ಜೆಸಿಐ ಪೂರ್ವಧ್ಯಕ್ಷ ಹೆಗ್ಗದ್ದೆ ಶಿವಾನಂದರಾವ್ ಹೇಳಿದರು.
ಸಚ್ಚಿದಾನಂದಪುರದಲ್ಲಿರುವ ಜೇಸೀಸ್ ಶಾಲೆಯಲ್ಲಿ ಜೆಸಿಐ ಸಪ್ತಾಹದ ನಾಲ್ಕನೇ ದಿನ ಮಂಗಳವಾರ ಕ್ಲೀನ್‌ಪ್ಲೇಟ್ ಅವೇರ್‌ನೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಕಷ್ಟಪಟ್ಟು ಬೆಳೆಯುವ ಆಹಾರ ಧಾನ್ಯ ನಮಗೆ ಆಹಾರವಾಗಿ ಉಪಯೋಗಿಸುತ್ತೇವೆ. ವಿಶ್ವದಲ್ಲಿ ಅನೇಕ ಜನರಿಗೆ ಹೊತ್ತಿನ ಊಟವೂ ಇಲ್ಲದೇ ಪರದಾಡುತ್ತಿದ್ದಾರೆ. ಅನೇಕ ಸಂದರ್ಭದಲ್ಲಿ ಊಟ, ತಿಂಡಿಯನ್ನು ಅಗತ್ಯಕ್ಕಿಂತ ಹೆಚ್ಚಿಗೆ ಹಾಕಿಕೊಂಡು ಹಾಳು ಮಾಡುತ್ತಾರೆ. ಆಹಾರವನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದರು.
ಜೆಸಿಐ ಅಧ್ಯಕ್ಷ ಸುಜನ್, ಊಟ ಮತ್ತು ತಿಂಡಿ ಮಾಡುವುದು ಒಂದು ಕಲೆಯಾಗಿದೆ.ಅಗತ್ಯವಿರುವಷ್ಟು ಮಾತ್ರ ಊಟ ಮಾಡುವುದು ಒಳಿತು ಎಂದರು. ಜೇಸೀಸ್ ಶಾಲೆ ಮುಖ್ಯಶಿಕ್ಷಕ ವಿನಯ್, ಜೆಸಿಐ ಸದಸ್ಯರಾದ ಶೂನ್ಯ ರಮೇಶ್, ಪೂರ್ಣಚಂದ್ರ ಇದ್ದರು.