ನ್ಯೂಸ್

ಸಿಇಟಿ ಅರ್ಜಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದ ಪರೀಕ್ಷಾ ಪ್ರಾಧಿಕಾರ

ಎನ್.ಎಲ್. ಶಿವಮಾದು

ಬೆಂಗಳೂರು ಸಿಇಟಿ-2024ಕ್ಕೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಅರ್ಜಿಯಲ್ಲಿ ತಪ್ಪಾಗಿ ನಮೂದಿಸಿರುವ ಆರ್‌ಡಿ ಸಂಖ್ಯೆ ಮತ್ತು ಇತರೆ ಕ್ಲೇಮ್ಸ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮೇ 9ರಿಂದ 15ರವರೆಗೆ ಅವಕಾಶ ನೀಡಿದೆ.

ಅರ್ಜಿಯಲ್ಲಿನ ಆರ್‌ಡಿ ಸಂಖ್ಯೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅನೇಕ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ಮನವಿಯನ್ನು ಗಮನಿಸಿ ಆರ್‌ಡಿ ಸಂಖ್ಯೆ ಹಾಗೂ ಇತರೆ ವಿಷಯಗಳ ತಿದ್ದುಪಡಿ ಮಾಡಿಕೊಳ್ಳಲು ಸಮಯ ನೀಡಿದೆ. ಬುಧವಾರ ಬೆಳಗ್ಗೆ 11ರಿಂದ ವೆಬ್‌ಸೈಟ್ ಪೋರ್ಟಲ್ ತೆರೆದುಕೊಳ್ಳಲಿದೆ.

ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ http://kea/kar.nic.in ನಲ್ಲಿ ಪಡೆಯಬಹುದು.